ಅಂಕಾರಾ: ಟರ್ಕಿಯ ಇಸ್ತಾನ್‍ಬುಲ್‍ನಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಭಾರತದ ನಿಖತ್ ಜರೀನ್ 52 ಕೆಜಿ ವಿಭಾಗದಲ್ಲಿ ಥಾಯ್ಲೆಂಡ್‍ನ ಜಿಟ್‍ಪಾಂಗ್ ಜುಟಾಮಾಸ್ ವಿರುದ್ಧ ಜಯಗಳಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.
ಟರ್ಕಿಯ ಇಸ್ತಾಂಬುಲ್ನಲ್ಲಿ ನಿನ್ನೆ (ಗುರುವಾರ) ನಡೆದ ಫೈನಲ್ ಪಂದ್ಯದಲ್ಲಿ ನಜತ್ ಜರೀನ್ ಅವರು ಥಾಯ್ಲೆಂಡ್ ಎದುರಾಳಿ ವಿರುದ್ಧ ಭರ್ಜರಿ 5-0 ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಥಾಯ್ಲೆಂಡ್‍ನ ಜಿಟ್‍ಪಾಂಗ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 30-27, 29-28, 29-28, 30-27, 29-28 ಅಂತರದಿಂದ ಜಯ ದಾಖಲಿಸಿರುವ ನಿಖಿತ್ ಜರೀನಾ, ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್‌ಎಲ್ ಮತ್ತು ಲೇಖಾ ಕೆಸಿ ಸಾಲಿಗೆ ಸೇರ್ಪಡೆಯಾದರು. ಜೊತೆಗೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಐದನೇ ಭಾರತೀಯ ಮಹಿಳಾ ಬಾಕ್ಸರ್ ಆಗಿ ಹೊರಹೊಮ್ಮಿದ್ದಾರೆ.
2018 ರಲ್ಲಿ ಬಾಕ್ಸಿಂಗ್ ಪಟು ಮೇರಿ ಕೋಮ್ ಚಿನ್ನ ಗೆದ್ದ ಬಳಿಕ ಭಾರತದ ಮಹಿಳಾ ಬಾಕ್ಸರ್ ಈ ಸಾಧನೆ ಮಾಡಿದ್ದು, ದೇಶಕ್ಕೆ ಚಿನ್ನದ ಪದಕದ ಬೇಟೆಯಾಡಿದ್ದಾರೆ.
PublicNext
20/05/2022 07:03 am