ಮುಂಬೈ: ಉಮ್ರಾನ್ ಮಲಿಕ್ ಅದ್ಭುತ ಬೌಲಿಂಗ್, ರಾಹುಲ್ ತ್ರಿಪಾಠಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 3 ರನ್‌ಗಳಿಂದ ರೋಚಕ ಗೆಲುವು ಸಾಧಿಸಿದೆ.
ಮುಂಬೈನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆದ 65ನೇ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡವು 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಸೋಲು ಒಪ್ಪಿಕೊಂಡಿತು.
ಮುಂಬೈ ಪರ ರೋಹಿತ್ ಶರ್ಮಾ 48 ರನ್, ಇಶಾನ್ ಕಿಶನ್ 43 ರನ್ ಹಾಗೂ ಟಿಮ್ ಡೇವಿಡ್ 46 ರನ್ ಗಳಿಸಿದರು. ಇನ್ನು ಹೈದರಾಬಾದ್ ಪರ ಉಮ್ರಾನ್ ಮಲಿಕ್ 3 ವಿಕೆಟ್ ಕಿತ್ತರೆ, ವಾಷಿಂಗ್ಟನ್ ಸುಂದರ್ ಹಾಗೂ ಭುವನೇಶ್ವರ ಕುಮಾರ್ ತಲಾ ಒಂದು ವಿಕೆಟ್ ಪಡೆದುಕೊಂಡು ತಂಡಕ್ಕೆ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಹೈದರಾಬಾದ್ ತಂಡದ ಪರ ರಾಹುಲ್ ತ್ರಿಪಾಠಿ 76 ರನ್, ಪ್ರಿಯಮ್ ಗಾರ್ಗ್ 42 ರನ್ ಹಾಗೂ ನಿಕೋಲಸ್ ಪೂರನ್ 38 ರನ್ ಗಳಿಸಿದ್ದರು. ಇನ್ನು ಮುಂಬೈ ಪರ ರಮಣದೀಪ್ ಸಿಂಗ್ 3 ವಿಕೆಟ್ ಕಿತ್ತು ಮಿಂಚಿದರೆ, ಡೇನಿಯಲ್ ಸ್ಯಾಮ್ಸ್, ರಿಲೆ ಮೆರೆಡಿತ್ ಹಾಗೂ ಜಸ್‌ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದುಕೊಂಡಿದ್ದರು.
PublicNext
17/05/2022 11:42 pm