ಬ್ಯಾಂಕಾಕ್: ಥಾಮಸ್ ಕಪ್ 2022 ಫೈನಲ್ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಂಡವು 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು 3-0 ಅಂತರದಿಂದ ಸೋಲಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಈ ಮೂಲಕ ಬ್ಯಾಡ್ಮಿಂಟನ್ ಇತಿಹಾಸದಲ್ಲೇ ಐತಿಹಾಸಿಕ ಗೆಲುವು ದಾಖಲಿಸಿದೆ.
ಐತಿಹಾಸಿಕ ಸಾಧನೆ ಮಾಡಿರುವ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ. ಭಾರತದ ಪರ ಲಕ್ಷ್ಯ ಸೇನ್ ಅವರು ಇಂಡೋನೇಷ್ಯಾದ ಆಂಥೋನಿ ಗಿಂಟಿಂಗ್ ಅವರನ್ನು 21-8 17-21 16-21 ರಿಂದ ಸೋಲಿಸಿ ತಂಡಕ್ಕೆ ಪ್ರಮುಖ 1-0 ಮುನ್ನಡೆ ನೀಡಿದರು. ಇದಾದ ಬಳಿಕ ಡಬಲ್ಸ್ನಲ್ಲಿ ಭಾರತದ ಸಾತ್ವಿಕ್ ಮತ್ತು ಚಿರಾಗ್ ಜೋಡಿ 18-21, 23-21, 21-19 ಅಂತರದಲ್ಲಿ ಗೆದ್ದು ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು. ನಂತರ ಮೂರನೇ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ 21-15, 23-21 ನೇರ ಗೇಮ್ ಗಳಿಂದ ಜೋನಾಥನ್ ಅವರನ್ನು ಸೋಲಿಸಿ ತಂಡಕ್ಕೆ ಐತಿಹಾಸಿಕ ಜಯದೊಂದಿಗೆ 3-0 ಮುನ್ನಡೆ ತಂದುಕೊಟ್ಟರು.
PublicNext
15/05/2022 04:48 pm