ಮುಂಬೈ: ಡೆವೊನ್ ಕಾನ್ವೆ ಅರ್ಧಶತಕ, ಋತುರಾಜ್ ಗಾಯಕ್ವಾಡ ಅಬ್ಬರದ ಸಹಾಯದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 209 ರನ್‌ಗಳ ಸವಾಲು ಒಡ್ಡಿದೆ.
ಮುಂಬೈನ ಡಿ.ವೈ.ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆಯುತ್ತಿರುವ 55ನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 6 ವಿಕೆಟ್ ನಷ್ಟಕ್ಕೆ 208 ರನ್ ಚಚ್ಚಿದೆ.
ಚೆನ್ನೈ ಪರ ಡೆವೊನ್ ಕಾನ್ವೆ 87 ರನ್, ಋತುರಾಜ್ ಗಾಯಕ್ವಾಡ 41 ರನ್, ಶಿವಂ ದುಬೆ 32 ರನ್ ಹಾಗೂ ನಾಯಕ ಎಂ.ಎಸ್. ಧೋನಿ 8 ಎಸೆತಗಳಲ್ಲಿ ಅಜೇಯ 21 ರನ್ ಗಳಿಸಿದರು.
PublicNext
08/05/2022 09:50 pm