ಐಪಿಎಲ್ 2022 ಅಂಕಗಳ ಪಟ್ಟಿಯಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ರಸ್ತುತ ಒಂಬತ್ತನೇ ಸ್ಥಾನದಲ್ಲಿದೆ. 14 ಅಂಕಗಳೊಂದಿಗೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಿಎಸ್‌ಕೆ ತನ್ನ ಉಳಿದ ನಾಲ್ಕು ಪಂದ್ಯಗಳನ್ನು ದೊಡ್ಡ ಅಂತರದೊಂದಿಗೆ ಗೆಲ್ಲುವ ಅಗತ್ಯವಿದೆ.
ಎಲ್ಲಾ ತಂಡಗಳು ಕೂಡ 14 ಪಂದ್ಯಗಳನ್ನು ಆಡಲಿದ್ದು ಇದರಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ನಾಲ್ಕು ತಂಡಗಳು ಪ್ಲೇಆಫ್‌ಗೆ ಪ್ರವೇಶ ಪಡೆಯಲಿದೆ. ಅಂಕಗಳ ಜೊತೆಗೆ ತಂಡಗಳ ನೆಟ್‌ರನ್‌ರೇಟ್ ಕೂಡ ಪ್ಲೇಆಫ್‌ಗೇರಲು ಬಹಳ ಮುಖ್ಯವಾಗುತ್ತದೆ. ಸಿಎಸ್‌ಕೆ ತಂಡ ಈಗಾಗಲೇ ಆಡಿರುವ 10 ಪಂದ್ಯಗಳ ಪೈಕಿ 3ರಲ್ಲಿ ಮಾತ್ರ ಗೆದ್ದು 7 ಪಂದ್ಯಗಳಲ್ಲಿ ಸೋಲು ಒಟ್ಟು 6 ಅಂಕ ಗಳಿಸಿದೆ. ಇನ್ನುಳಿದ ಪಂದ್ಯಗಳಲ್ಲಿ ಚೆನ್ನೈ ತಂಡವು ಇಂದು ಡೆಲ್ಲಿ ಕ್ಯಾಪಿಟಲ್ಸ್, ಮೇ 12ರಂದು ಮುಂಬೈ, ಮೇ 15ರಂದು ಗುಜರಾತ್ ಟೈಟಾನ್ಸ್ ಹಾಗೂ ಮೇ 20ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲ್ಲಲೇ ಬೇಕು. ಆದರೆ ಪ್ಲೇಆಫ್‌ಗೆ ಪ್ರವೇಶಿಸಲು ಸಮೀಪದಲ್ಲಿರುವ ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಚೆನ್ನೈಗೆ ಆಘಾತ ನೀಡಬಲ್ಲವು.
PublicNext
08/05/2022 10:49 am