ಮುಂಬೈ: ಪ್ರತಿ ವರ್ಷ ಆರ್ ಸಿಬಿ ತಂಡ ಟೂರ್ನಿಯ 1 ಪಂದ್ಯದಲ್ಲಿ ಹಸಿರು ಜೆರ್ಸಿತೊಟ್ಟು ಪರಿಸರ ರಕ್ಷಣೆ ಕುರಿತಾಗಿ ವಿಶೇಷ ಅರಿವನ್ನು ಮೂಡಿಸುತ್ತಿತ್ತು. ಈ ಬಾರಿಯೂ ಕೂಡ ಹಸಿರು ಬಣ್ಣದ ಜೆರ್ಸಿ ತೊಟ್ಟು ಆರ್ ಸಿಬಿ (ನಾಳೆ) ಭಾನುವಾರ ಹೈದರಾಬಾದ್ ವಿರುದ್ಧ ಆಟವಾಡಲಿದೆ.
ಈಗಾಗಲೇ ಆಟಗಾರರು ಹಸಿರು ಬಣ್ಣದ ಜೆರ್ಸಿ ತೊಟ್ಟು ಕಾಣಿಸಿಕೊಳ್ಳುವ ವೀಡಿಯೋ ಆರ್ ಸಿಬಿಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಕಳೆದ ವರ್ಷ ಆರ್ ಸಿಬಿ ತಂಡ ಹಸಿರು ಬಣ್ಣದ ಜೆರ್ಸಿಯ ಬದಲು ಪಿಪಿಇ ಕಿಟ್ನಂ ಥ ತಿಳಿ ನೀಲಿ ಬಣ್ಣದ ಜೆರ್ಸಿಯೊಂದಿಗೆ ಕೆಕೆಆರ್ ವಿರುದ್ಧ ಕಣ್ಣಕ್ಕಿಳಿದು ಕೊರೊನಾ ವಾರಿಯರ್ಸ್ ಗೆ ಗೌರವ ಸಲ್ಲಿಸಿತ್ತು. ಇದಲ್ಲದೆ ಪಂದ್ಯದ ಬಳಿಕ ಎಲ್ಲಾ ಆಟಗಾರರ ಜೆರ್ಸಿಯನ್ನು ಹರಾಜು ಹಾಕಲಾಗಿತ್ತು. ಇದರಿಂದ ಬಂದ ಹಣವನ್ನು ಭಾರತದಲ್ಲಿ ಕೊರೊನಾ ಲಸಿಕೆ ನೀಡಲು ಆರ್ ಸಿಬಿ ಫ್ರಾಂಚೈಸ್ ಮುಂದಾಗಿತ್ತು.
ಇದೀಗ 15ನೇ ಆವೃತ್ತಿ ಐಪಿಎಲ್ ನಲ್ಲಿ ಸೋಲು ಗೆಲುವಿನೊಂದಿಗೆ ಮುನ್ನುಗ್ಗಿ ಆರ್ಸಿಬಿ ತಂಡ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
PublicNext
07/05/2022 02:06 pm