ಮುಂಬೈ: ರೋಹಿತ್ ಶರ್ಮಾ, ಇಶಾನ್ ಕಿಶನ್ ಬ್ಯಾಟಿಂಗ್ ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ ತಂಡಕ್ಕೆ 178 ರನ್‌ಗಳ ಗುರಿ ನೀಡಿದೆ.
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆಯುತ್ತಿರುವ 51ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 6 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದೆ.
ಮುಂಬೈ ಪರ ರೋಹಿತ್ ಶರ್ಮಾ 43 ರನ್, ಇಶಾನ್ ಕಿಶನ್ 45 ರನ್ ಹಾಗೂ ಟಿಮ್ ಡೇವಿಡ್ 44 ರನ್ ಗಳಿಸಿದರು. ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ತೋರಿದ ಸೂರ್ಯಕುಮಾರ್ ಯಾದವ್ 13 ರನ್, ಕೀರಾನ್ ಪೊಲಾರ್ಡ್ 4 ರನ್‌ಗೆ ವಿಕೆಟ್ ಕಳೆದುಕೊಂಡರು. ಇನ್ನು ಗುಜರಾತ್ ಪರ ರಶೀದ್ ಖಾನ್ 2 ವಿಕೆಟ್ ಕಿತ್ತರೆ, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್ ಹಾಗೂ ಪ್ರದೀಪ್ ಸಾಂಗ್ವಾನ್ ತಲಾ 1 ವಿಕೆಟ್ ಪಡೆದುಕೊಂಡರು.
PublicNext
06/05/2022 09:25 pm