ಪುಣೆ: ಎಂಸಿಎ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಲಖನೌ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ರೋಚಕತೆಯಿಂದ ಕೂಡಿದೆ.ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 3ರಲ್ಲಿ ಸೋತಿರುವ ಲಖನೌ ತಂಡ ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಮತ್ತೊಂದೆಡೆ ಆಡಿದ 8 ಪಂದ್ಯಗಳಲ್ಲಿ ತಲಾ 4 ಜಯ-ಸೋಲು ಅನುಭವಿಸಿರುವ ಪಂಜಾಬ್ 6ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಸೋತರೆ ಮಯಾಂಕ್ ಅಗರ್ವಾಲ್ ಬಳಗದ ಹಾದಿ ಕಠಿಣಗೊಳ್ಳಲಿದ್ದು, ಗೆಲುವಿನ ಹಂಬಲದಲ್ಲಿದೆ. ರಾಹುಲ್ ಟೂರ್ನಿಯಲ್ಲಿ ಇದುವರೆಗೆ 2 ಶತಕ ಸಿಡಿಸಿ ಭರ್ಜರಿ ಫಾರ್ಮ್ನಲ್ಲಿದ್ದರೆ, ಮಯಾಂಕ್ ಅಸ್ಥಿರ ನಿರ್ವಹಣೆ ತೋರಿದ್ದಾರೆ. ರಾಹುಲ್ ತಮ್ಮ ಮಾಜಿ ತಂಡದ ವಿರುದ್ಧವೂ ಅದೇ ಲಯ ಮುಂದುವರಿಸುವ ತವಕದಲ್ಲಿದ್ದಾರೆ.
ಲಖನೌ ಸೂಪರ್ ಜೈಂಟ್ಸ್ : ಕನ್ನಡಿಗ ಮನೀಷ್ ಪಾಂಡೆ ಬ್ಯಾಟಿಂಗ್ ವಿಭಾಗದಲ್ಲಿ ತಂಡದ ಏಕೈಕ ವೀಕ್ ಲಿಂಕ್ ಆಗಿದ್ದು, ಅವರ ಬದಲಿಗೆ ಮನನ್ ವೊಹ್ರಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಆವೇಶ್ ಖಾನ್ ಮರಳಿದರೆ, ಮೊಹ್ಸಿನ್ ಖಾನ್ ಹೊರಗುಳಿಯಲಿದ್ದಾರೆ.
ಪಂಜಾಬ್ ಕಿಂಗ್ಸ್: ಕಳೆದ ಪಂದ್ಯದಲ್ಲಿ ಕೆಲ ಬದಲಾವಣೆ ಮಾಡಿ ಯಶಸ್ಸು ಕಂಡಿದ್ದ ಪಂಜಾಬ್ ತಂಡದ ಸಂಯೋಜನೆ ಈ ಬಾರಿ ಬದಲಾಗುವ ಸಾಧ್ಯತೆಗಳಿಲ್ಲ. ಭಾನುಕ ರಾಜಪಕ್ಷ 3ನೇ ಕ್ರಮಾಂಕದ ಸ್ಥಾನ ಕಾಯ್ದುಕೊಳ್ಳಲಿದ್ದಾರೆ.
PublicNext
29/04/2022 09:04 am