ಮುಂಬೈ: ಐಪಿಎಲ್ 15 ನೇ ಆವೃತ್ತಿಯಲ್ಲಿ ಇಂದು ಕೋಲ್ಕತ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಲಿವೆ. ಇದು ಟೂರ್ನಿಯಲ್ಲಿ ಉಭಯ ತಂಡಗಳ ನಡುವಿನ 2ನೇ ಮುಖಾಮುಖಿ ಆಗಿದೆ. ಮೊದಲ ಸೆಣಸಾಟದಲ್ಲಿ ಗೆದ್ದಿರುವ ಡೆಲ್ಲಿ ಅದೇ ಫಲಿತಾಂಶ ಪುನರಾವರ್ತಿಸುವ ತವಕದಲ್ಲಿದ್ದರೆ, ಕೆಕೆಆರ್ ತಂಡ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ.
ಡೆಲ್ಲಿ ಇದುವರೆಗೆ ಆಡಿದ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 4ರಲ್ಲಿ ಸೋತಿದ್ದು, ಗೆಲುವಿನ ಲಯ ಕಾಯ್ದುಕೊಳ್ಳಲು ಪರದಾಡುತ್ತ ಬಂದಿದೆ.
ಆಡಿದ ಮೊದಲ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಬೀಗಿದ್ದ ಶ್ರೇಯಸ್ ಅಯ್ಯರ್ ಪಡೆ, ನಂತರದ ನಾಲ್ಕೂ ಪಂದ್ಯಗಳಲ್ಲಿ ಸೋತಿರುವುದು ಪ್ಲೇಆಪ್ ರೇಸ್ ನಲ್ಲಿ ದೊಡ್ಡ ಹಿನ್ನಡೆ ತಂದಿದೆ.
ಈ ಪಂದ್ಯದಲ್ಲೂ ಸೋತರೆ ಕೆಕೆಆರ್ ಪ್ಲೇಆಪ್ ಆಸೆಯನ್ನು ಬಹುತೇಕ ಕೈಬಿಡಬೇಕಾಗುತ್ತದೆ.
PublicNext
28/04/2022 08:12 am