ಮುಂಬೈ: ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 11 ರನ್‌ಗಳಿಂದ ಗೆದ್ದು ಬೀಗಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆದ 38ನೇ ಪಂದ್ಯದಲ್ಲಿ ಚೆನ್ನೈ ತಂಡದ ನಾಯಕ ರವೀಂದ್ರ ಜಡೇಜಾ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡವು 4 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು.
ಬಳಿಕ ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲು ಸೋಲು ಒಪ್ಪಿಕೊಂಡಿತು. ಚೆನ್ನೈ ಪರ ಅಂಬಾಟಿ ರಾಯ್ಡು 78 ರನ್, ಋತುರಾಜ್ ಗಾಯಕ್ವಾಡ 30 ರನ್ ಗಳಿಸಿದರು.
ಇದಕ್ಕೂ ಮುನ್ನ ಪಂಜಾಬ್ ತಂಡದ ಪರ ಶಿಖರ್ ಧವನ್ 88 ರನ್, ಭಾನುಕ ರಾಜಪಕ್ಸ 42 ರನ್, ನಾಯಕ ಮಯಾಂಕ್ ಅಗರ್ವಾಲ್ 18 ರನ್ ಗಳಿಸಿದ್ದರು.
PublicNext
25/04/2022 11:35 pm