ಮುಂಬೈ: ನಾಯಕ ಕೆ.ಎಲ್. ರಾಹುಲ್ ಸ್ಫೋಟಕ ಬ್ಯಾಟಿಂಗ್, ಆವೇಶ್ ಖಾನ್ ಮಾಂತ್ರಿಕ ಬೌಲಿಂಗ್ ಸಹಾಯದಿಂದ ಲಕ್ನೋ ಸೂಪರ್ ಜೈಂಟ್ಸ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್‌ಗಳಿಂದ ಜಯ ಸಾಧಿಸಿದೆ. ಈ ಮೂಲಕ ಮುಂಬೈ ಆಡಿದ ಎಲ್ಲ ಆರು ಪಂದ್ಯಗಳಲ್ಲೂ ಸೋಲು ಕಂಡು ಕಂಗೆಟ್ಟಿದೆ.
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆದ 26ನೇ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು 4 ವಿಕೆಟ್ ನಷ್ಟಕ್ಕೆ 199 ರನ್ ಚಚ್ಚಿತ್ತು.
ಬಳಿಕ ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 9 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಸೋಲು ಒಪ್ಪಿಕೊಂಡಿತು. ಮುಂಬೈ ಪರ ಸೂರ್ಯಕುಮಾರ್ ಯಾದವ್ 37 ರನ್, ಡೆವಾಲ್ಡ್ ಬ್ರೆವಿಸ್ 31 ರನ್, ತಿಲಕ್ ವರ್ಮಾ 26 ರನ್ ಹಾಗೂ ಕೀರಾನ್ ಪೊಲಾರ್ಡ್ 25 ರನ್ ಗಳಿಸಿದರು. ಇನ್ನು ಲಕ್ನೋ ಪರ ಆವೇಶ್ ಖಾನ್ ಮಾಂತ್ರಿಕ ಬೌಲಿಂಗ್ ಪ್ರದರ್ಶನ ನೀಡಿದರು. ಅವರು 4 ಓವರ್ ಬೌಲಿಂಗ್ ಮಾಡಿ 30 ರನ್ ನೀಡಿ ಪ್ರಮುಖ 3 ವಿಕೆಟ್ ಉರುಳಿಸಿದರು. ಉಳಿದಂತೆ ಜೇಸನ್ ಹೋಲ್ಡರ್, ದುಸ್ಮಂತ ಚಮೀರ, ರವಿ ಬಿಷ್ಣೋಯ್ ಹಾಗೂ ಮಾರ್ಕಸ್ ಸ್ಟೈನಿಸ್ ತಲಾ 1 ವಿಕೆಟ್ ಪಡೆದುಕೊಂಡರು.
ಇದಕ್ಕೂ ಮುನ್ನ ಲಕ್ನೋ ಪರ ನಾಯಕ ಕೆ.ಎಲ್.ರಾಹುಲ್ ಅಜೇಯ 103 ರನ್ (60 ಎಸೆತ, 9 ಬೌಂಡರಿ, 5 ಸಿಕ್ಸ್), ಮನೀಶ್ ಪಾಂಡೆ 38 ರನ್ ಹಾಗೂ ಕ್ವಿಂಟನ್ ಡಿ ಕಾಕ್ 24 ರನ್ ಗಳಿಸಿದ್ದರು.
PublicNext
16/04/2022 07:41 pm