ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯ ಆಟಗಾರ ಎಂಬುದನ್ನು ಮರೆತು ಶಮಿಗೆ ಮನಬಂದಂತೆ ಬೈದ ಹಾರ್ದಿಕ್- ವಿಡಿಯೋ ವೈರಲ್

ಮುಂಬೈ: ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ತಂಡದ ಹಿರಿಯ ಆಟಗಾರ, ಅನುಭವಿ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಮನಬಂದಂತೆ ಬೈದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾರ್ದಿಕ್ ಪಾಂಡ್ಯ ನಡೆಯ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.

ಹೌದು. ಐಪಿಎಲ್ 2022ರ ಭಾಗವಾಗಿ ಸೋಮವಾರ ನಡೆದ ಸನ್​​ರೈಸರ್ಸ್​ ಹೈದರಾಬಾದ್ ಪಂದ್ಯದಲ್ಲಿ ಗುಜರಾತ್ ತಂಡವು 8 ವಿಕೆಟ್​​ಗಳ ಸೋಲು ಕಂಡಿದೆ. ಈ ಮಧ್ಯೆ ಅಂದ್ರೆ ಹೈದರಾಬಾದ್ ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿದರು. ಇದೇ ಓವರ್ ಅನ್ನು ಟಾರ್ಗೆಟ್ ಮಾಡಿದ ಹೈದರಾಬಾದ್ ದೊಡ್ಡ ಹೊಡೆತಕ್ಕೆ ಮುಂದಾಯಿತು. ಅದರಂತೆ ಪಾಂಡ್ಯ ಓವರ್​​ನ ಎರಡನೇ ಮತ್ತು ಮೂರನೇ ಬಾಲ್​ನಲ್ಲಿ ವಿಲಿಯಮ್ಸನ್ ಸತತ ಎರಡು ಸಿಕ್ಸರ್ ಸಿಡಿಸಿದರು. ಅದಾಗಲೇ ಕೋಪಗೊಂಡಿದ್ದ ಹಾರ್ದಿಕ್ ಆರನೇ ಎಸೆತವನ್ನು ರಾಹುಲ್ ತ್ರಿಪಾಠಿ ಅವರಿಗೆ ಶಾರ್ಟ್ ಎಸೆತದರು. ಇದನ್ನು ಅಪ್ಪರ್ ಕಟ್ ಮೂಲಕ ಹೊಡೆದ ತ್ರಿಪಾಠಿ, ಚೆಂಡು ಸೀದಾ ಡೀಪ್ ಥರ್ಡ್​ ಮ್ಯಾನ್ ಕಡೆ ಹೋಯಿತು.

ಥರ್ಡ್​ ಮ್ಯಾನ್ ಫೀಲ್ಡಿಂಗ್​ನಲ್ಲಿ ಮೊಹಮ್ಮದ್ ಶಮಿ ಇದ್ದರು. ಓಡಿ ಬಂದರೂ ಶಮಿಗೆ ಆ ಕ್ಯಾಚ್ ಅನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ವಲ್ಪ ಹಿಂದೆ ಹೋಗಿ ಚೆಂಡು ನೆಲಕ್ಕೆ ತಾಗಿದ ಮೇಲೆ ಹಿಡಿದರು. ಇದರಿಂದ ಕೋಪಗೊಂಡ ಹಾರ್ದಿಕ್ ಪಾಂಡ್ಯ ಅವರು ಫೀಲ್ಡಿಂಗ್ ವಿಚಾರವಾಗಿ ಶಮಿ ಮೇಲೆ ಕಿರುಚಾಡಿದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Edited By : Vijay Kumar
PublicNext

PublicNext

12/04/2022 11:52 am

Cinque Terre

57.91 K

Cinque Terre

4

ಸಂಬಂಧಿತ ಸುದ್ದಿ