ಮುಂಬೈ: ಲಿಯಾಮ್ ಲಿವಿಂಗ್ಸ್ಟೋನ್ ಅಬ್ಬರದ ಅರ್ಧಶತಕ ಹಾಗೂ ಬೌಲಿಂಗ್ ಪಡೆಯ ತಂತ್ರಗಾರಿಕೆಯಿಂದ ಪಂಜಾಬ್ ಕಿಂಗ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 54 ರನ್ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ಚೆನ್ನೈ ತಂಡವು ಹ್ಯಾಟ್ರಿಕ್ ಸೋಲಿಗೆ ಗುರಿಯಾಗಿದೆ.
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಇಂದು ನಡೆಯುತ್ತಿರುವ ಐಪಿಎಲ್ 2022ರ 11ನೇ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡವು 8 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತ್ತು.
181 ರನ್ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡವು 18 ಓವರ್ಗಳಲ್ಲಿ ಎಲ್ಲಾ 10 ವಿಕೆಟ್ ಕಳೆದುಕೊಂಡು ಕೇವಲ 126 ರನ್ ಗಳಿಸಲು ಶಕ್ತವಾಯಿತು.
ಇದಕ್ಕೂ ಮುನ್ನ ಪಂಜಾಬ್ ಪರ ಲಿಯಾಮ್ ಲಿವಿಂಗ್ಸ್ಟೋನ್ 60 ರನ್ (32 ಎಸೆತ, 5 ಬೌಂಡರಿ, 5 ಸಿಕ್ಸ್), ಶಿಖರ್ ಧವನ್ (33 ರನ್) ಗಳಿಸಿದ್ದರು. ನಾಯಕ ಮಯಾಂಕ್ ಅಗರ್ವಾಲ್ (4 ರನ್), ಭಾನುಕ ರಾಜಪಕ್ಸ (9 ರನ್), ಶಾರುಖ್ ಖಾನ್ (6 ರನ್) ಬ್ಯಾಟಿಂಗ್ ವೈಫಲ್ಯ ತೋರಿದ್ದರು.
PublicNext
03/04/2022 11:20 pm