ಆಸ್ಟ್ರೇಲಿಯಾ: ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ನಿಜಕ್ಕೂ ಸ್ಪೂರ್ತಿದಾಯ ವ್ಯಕ್ತಿನೇ. ಅವರಿಲ್ಲ ಅನ್ನೋ ನೋವಿನಲ್ಲಿ ಅವರ ಅಭಿಮಾನಿಗಳಿದ್ದಾರೆ. ಅಂತಹ ಅಭಿಮಾನಿಗಳಲ್ಲಿ ಆಸ್ಟ್ರೇಲಿಯಾದ ಮಹಿಳಾ ಅಭಿಮಾನಿಯೊಬ್ಬರು ಶೇನ್ ವಾರ್ನ್ ಹಚ್ಚೆಯನ್ನ ತಮ್ಮ ತೊಡೆ ಮೇಲೆ ಹಾಕಿಸಿಕೊಂಡು ಅಭಿಮಾನ ಮರೆದಿದ್ದಾರೆ.
ಶೇನ್ ವಾರ್ನ್ ಹೆಚ್ಚೆ ಹಾಕಿಸಿಕೊಂಡ ಮಹಿಳೆಯ ಹೆಸರು ಕೆಲ್ಲಿ ಕಾರ್ಟ್ ಬೆಲ್- ಈ ಮಹಿಳೆ 17 ವರ್ಷದ ಹಿಂದೆ ಶೇನ್ ವಾರ್ನ್ ರನ್ನ ಭೇಟಿ ಆಗಿದ್ದರು. ಆ ಟೈಮ್‌ನಲ್ಲಿ ಕೌಟುಂಬ ಸಮಸ್ಯೆಯಿಂದಲೂ ಈ ಮಹಿಳೆ ಕಷ್ಟಪಡುತ್ತಿದ್ದರು. ಆಗಲೇ ಈ ಮಹಿಳೆಗೆ ಸೂರ್ತಿದಾಯಕ ಮಾತುಗಳನ್ನ ಹೇಳಿದ್ದ ಶೇನ್ ವಾರ್ನ್, ಪ್ರೀತಿಸೋದು ಹೇಗೆ ಅಂತ ಹೇಳಿಕೊಟ್ಟಿದ್ದರು.
ಈ ವಿಷಯವನ್ನ ಈಗ ನೆನಪಿಸಿಕೊಂಡಿರೋ ಕೆಲ್ಲಿ ಕಾರ್ಟ್, ತೊಡೆ ಮೇಲೆ ಹಚ್ಚೆ ಹಾಕಿಸಿಕೊಂಡು ತಮ್ಮದೇ ರೀತಿಯಲ್ಲಿ ಶೇನ್ ವಾರ್ನ್‌ಗೆ ಗೌರವ ಸಲ್ಲಿಸಿದ್ದಾರೆ.
PublicNext
30/03/2022 10:32 pm