ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಮಿಂಚಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳಪೆ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಿಂದಾಗಿ ಹೀನಾಯ ಸೋಲು ಕಂಡಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಹರ್ಷಲ್ ಪಟೇಲ್‌ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪಂದ್ಯದ 17ನೇ ಓವರ್ನಲ್ಲಿ ಹರ್ಷಲ್ ಪಟೇಲ್ ಎಸೆತದಲ್ಲಿ ಅನೂಜ್ ರಾವತ್ ಓಡಿಯನ್ ಸ್ಮಿತ್ ಅವರ ಕ್ಯಾಚ್ ಕೈಚೆಲ್ಲಿದ್ದರು. ಈ ವೇಳೆ ಸ್ಮಿತ್ ಕೇವಲ 1 ರನ್ ಮಾತ್ರಗಳಿಸಿದ್ದರು. ಅನೂಜ್ ರಾವತ್ ಬಿಟ್ಟಿರುವ ಕ್ಯಾಚ್ನಿಂದಾಗಿ ಆರ್‌ಸಿಬಿ ಸೋತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ನನ್ನ ಪ್ರಕಾರ ಆರ್‌ಸಿಬಿ ಸೋಲಿಗೆ ಕಾರಣ ಅನೂಜ್ ಅಲ್ಲ, ಬದಲಾಗಿ ಹರ್ಷಲ್ ಪಟೇಲ್ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಅನೂಜ್ ರಾವತ್ ಕ್ಯಾಚ್ ಬಿಟ್ಟ ಬಳಿಕ ಓಡಿಯನ್ ಸ್ಮಿತ್ 3 ಸಿಕ್ಸರ್ನೊಂದಿಗೆ ಕೇವಲ 8 ಎಸೆತಗಳಲ್ಲಿ 25 ರನ್ ಬಾರಿಸಿ ಪಂದ್ಯದ ಗತಿ ಬದಲಿಸಿದ್ದರು. ಆದರೆ ಇದಕ್ಕೆ ಕ್ಯಾಚ್ ಬಿಟ್ಟಿದ್ದು ಮಾತ್ರ ಕಾರಣವಲ್ಲ. ಓಡಿಯನ್ ಸ್ಮಿತ್ ಅವರ ರನ್ ಔಟ್ ಅವಕಾಶವನ್ನು ಕೈಚೆಲ್ಲಿದ್ದೇ ಸೋಲಿಗೆ ಪ್ರಮುಖ ಕಾರಣ ಎಂದು ಸೆಹ್ವಾಗ್ ತಿಳಿಸಿದ್ದಾರೆ.
10.75 ಕೋಟಿ ರೂ.ಗೆ ಖರೀದಿಸಿದ ಆಟಗಾರನು ಇಂತಹ ಬಾಲಿಶ ತಪ್ಪು ಮಾಡಿದರೆ RCB ಹೇಗೆ ಗೆಲ್ಲುತ್ತದೆ? ಎಂದು ವೀರೇಂದ್ರ ಸೆಹ್ವಾಗ್ ಪ್ರಶ್ನಿಸಿದ್ದಾರೆ.
PublicNext
28/03/2022 03:30 pm