ಬೆಂಗಳೂರು: ಸದಸ್ಯತ್ವ ಅಭಿಯಾನದಲ್ಲಿ ನಿರೀಕ್ಷಿತ ಗುರಿ ತಲುಪಲಾರದೆ ಸೋತು ಸುಣ್ಣವಾಗಿರುವ ಭ್ರಷ್ಟ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಈಗ ಸಿದ್ದರಾಮಯ್ಯ ವಿಲನ್ ಆಗಿ ಪರಿಣಮಿಸಿದ್ದಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ಆರೋಪಿಸಿದೆ.
#ಅಸಹಾಯಕಡಿಕೆಶಿ ಹ್ಯಾಶ್ ಟ್ಯಾಗ್ ಹಾಕಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, 'ಹಿಂದುತ್ವದ ವಿರುದ್ಧ ಮಾತನಾಡಿ ಡಿಕೆಶಿ ನಾಯಕತ್ವವನ್ನು ಮುಗಿಸುವುದು ಸಿದ್ದರಾಮಯ್ಯ ಮೊದಲ ಗುರಿ. ಇದನ್ನು ನೋಡಿಯೂ ಡಿ.ಕೆ. ಶಿವಕುಮಾರ್ ಅಸಹಾಯಕರಾಗಿದ್ದಾರೆ' ಎಂದಿದೆ.
ತಮ್ಮ ವಿರುದ್ಧ ಉಗ್ರಪ್ಪ ಹೇಳಿಕೆ ನೀಡಿದರೂ ಡಿ ಶಿವಕುಮಾರ್ ಏನು ಮಾಡಲಿಲ್ಲ. ಕೆಪಿಸಿಸಿ ಪ್ರಚಾರ ಸಮಿತಿಗೆ ಎಂ.ಬಿ.ಪಾಟೀಲ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದಾಗಲೂ ಮೌನಕ್ಕೆ ಶರಣಾದರು. ಹಿಜಾಬ್ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಿ ಎಂದು ತಿಳಿ ಹೇಳಿದಾಗಲೂ ಸಿದ್ದರಾಮಯ್ಯ ಮಾತೇ ಕೇಳಲಿಲ್ಲ. ಇದರರ್ಥ ಡಿಕೆಶಿ ಅಸಹಾಯಕರೇ? ಎಂದು ಟೀಕಿಸಿದೆ.
ಧರ್ಮಗುರುಗಳ ವಿರುದ್ಧ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆ ಅವರ ಪುತ್ರರತ್ನ ಡಾ.ಯತೀಂದ್ರ ಅವರಿಗೆ ಮಾತ್ರ ಸಂತೋಷ ನೀಡಿದೆ. ಎಷ್ಟೆಂದರೂ ತಂದೆಯಂತೇ ಮಗನಲ್ಲವೇ!! ಆದರೆ ಕಾಂಗ್ರೆಸ್ ಪಕ್ಷದ ಇತರೆ ನಾಯಕರು ಇದನ್ನು ಸಮರ್ಥಿಸುತ್ತಾರೆಯೇ? ನಿಮ್ಮ ನಿಲುವೇನು #ಅಸಹಾಯಕಡಿಕೆಶಿ ಅವರೇ ಎಂದು ಬಿಜೆಪಿ ಪ್ರಶ್ನಿಸಿದೆ.
PublicNext
27/03/2022 09:24 pm