ಬೆಂಗಳೂರು: ಬಹುನಿರೀಕ್ಷಿತ 15 ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. 2019 ರ ಬಳಿಕ ಇದೇ ಮೊದಲ ಬಾರಿಗೆ ಪ್ರೇಕ್ಷಕರು ಮೈದಾನದಲ್ಲಿ ಪಂದ್ಯ ವೀಕ್ಷಿಸಲು ಬಿಸಿಸಿಐ (BCCI) ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮೈದಾನಕ್ಕೆ ತೆರಳಿ ಪಂದ್ಯ ವೀಕ್ಷಿಸಲು ಟಿಕೆಟ್ ಪಡೆಯುವ ಬಗ್ಗೆ ಇಲ್ಲಿದೆ ನೋಡಿ ಡಿಟೈಲ್ಸ್
25% ಪ್ರೇಕ್ಷಕರಿಗೆ ಅವಕಾಶ bookmyshow.com ಮೂಲಕ ಟಿಕೆಟ್ ಖರೀದಿ
ಟಿಕೆಟ್ ಖರೀದಿ ಹೇಗೆ..?
ಆನ್ ಲೈನ್ ನಲ್ಲಿ bookmyshow.com ಮೂಲಕ ಟಿಕೆಟ್ ಖರೀದಿಸಬಹುದಾಗಿದೆ. ಒಬ್ಬರು ಒಂದು ಪಂದ್ಯಕ್ಕೆ ಒಂದು ಟಿಕೆಟ್ ಮಾತ್ರ ಖರೀದಿಸಬಹುದಾಗಿದೆ. ಇನ್ನು 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಸ್ಟೇಡಿಯಂ ಪ್ರವೇಶಿಸುವ ಮುನ್ನ ಸಿಬ್ಬಂದಿಗಳಿಗೆ ತೋರಿಸಬೇಕು. ಹಾಗೂ ಎರಡು ವರ್ಷ ಮೇಲ್ಪಟ್ಟ ಮಕ್ಕಳು ಟಿಕೆಟ್ ಖರೀದಿಸಿ ಮೈದಾನಕ್ಕೆ ಪ್ರವೇಶ ಪಡೆಯಬೇಕು.
ಒಂದೊಂದು ರೀತಿಯ ಟಿಕೆಟ್ ದರ
ಇನ್ನು ಐಪಿಎಲ್ ಪಂದ್ಯಗಳ ವೀಕ್ಷಣೆಗೆ ಒಂದೊಂದು ಸ್ಟೇಡಿಯಂಗೆ ಒಂದೊಂದು ರೀತಿಯ ಟಿಕೆಟ್ ದರ ನಿಗದಿಯಾಗಿದ್ದು, ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ 2,500 ರಿಂದ 4,000 ರೂ ವರೆಗಿನ ಟಿಕೆಟ್ ಗಳು ಲಭ್ಯವಿವೆ. ಇನ್ನು ಬ್ರಾಬೋರ್ನ್ ಸ್ಟೇಡಿಯಂನಲ್ಲಿ ಟಿಕೆಟ್ ಬೆಲೆ 3000 ರೂ.ಗಳಿಂದ 3,500 ರುಪಾಯಿ.
ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ 800 ರೂ.ಗಳಿಂದ 2,500 ರೂಗಳ ವರೆಗಿನ ಟಿಕೆಟ್ ಲಭ್ಯ
ನವಿ ಮುಂಬೈನಲ್ಲಿರುವ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ 800 ರೂ.ಗಳಿಂದ 2,500 ರೂ., ಪುಣೆಯಲ್ಲಿನ ಎಂಸಿಎ ಸ್ಟೇಡಿಯಂನಲ್ಲಿ 1,000 ರೂ. 8,000 ರುಪಾಯಿಗಳವರೆಗಿನ ಟಿಕೆಟ್ ಲಭ್ಯವಿವೆ.
PublicNext
23/03/2022 05:14 pm