ಬೆಂಗಳೂರು: ಐಪಿಎಲ್ 15 ನೇ ಆವೃತ್ತಿಯ ಆರಂಭದ ಕಾವು ಹೆಚ್ಚಾಗಿದೆ. ಇದರ ಮಧ್ಯೆ ಮೊದಲ ಬಾರಿಗೆ ಐಪಿಎಲ್ ಅಂಗಳಕ್ಕೆ ಪಾದಾರ್ಪನೆ ಮಾಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ತನ್ನ ಸಮವಸ್ತ್ರವನ್ನು ಅಧಿಕೃತವಾಗಿ ಅನಾವರಣ ಮಾಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿರುವ ಹೊಸ ತಂಡಗಳ ಪೈಕಿ ಲಖನೌ ಫ್ರಾಂಚೈಸಿ ಕೂಡ ಒಂದಾಗಿದೆ.
ಸ್ಟಾರ್ ಆಟಗಾರ ಕೆಎಲ್ ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡ ತಿಳಿ ಹಸಿರು ಬಣ್ಣದ ಅತ್ಯಾಕರ್ಷಕ ಸಮವಸ್ತ್ರದೊಂದಿಗೆ ಐಪಿಎಲ್ 2022 ಟೂರ್ನಿಯನ್ನಾಡಲಿದೆ. ಲಖನೌ ತಂಡ ಮಾರ್ಚ್ 28 ರಂದು ಮತ್ತೊಂದು ಹೊಸ ತಂಡವಾದ ಗುಜರಾತ್ ಟೈಟನ್ಸ್ ಎದುರು ತನ್ನ ಅಭಿಯಾನ ಆರಂಭಿಸಲಿದೆ. ಮಾರ್ಚ್ 26 ರಿಂದ ಮೇ 29 ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಬರೋಬ್ಬರಿ 70 ಲೀಗ್ ಪಂದ್ಯಗಳು ನಡೆಯಲಿವೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ
ಕೆಎಲ್ ರಾಹುಲ್ (ಕ್ಯಾಪ್ಟನ್), ರವಿ ಬಿಷ್ಣೋಯ್, ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡ, ಜೇಸನ್ ಹೋಲ್ಡರ್, ಮನೀಶ್ ಪಾಂಡೆ, ಕ್ವಿಂಟನ್ ಡಿ'ಕಾಕ್ (ವಿಕೆಟ್ಕೀಪರ್), ಕೃಣಾಲ್ ಪಾಂಡ್ಯ, ಮಾರ್ಕ್ ವುಡ್, ಅವೇಶ್ ಖಾನ್, ಅಂಕಿತ್ ಸಿಂಗ್ ರಜಪೂತ್, ಕೃಷ್ಣಪ್ಪ ಗೌತಮ್, ದುಷ್ಮಾಂತ ಚಮೀರ, ಶಹಬಾಜ್ ನದೀಮ್, ಮನನ್ ವೋಹ್ರ, ಮೊಹ್ಸಿನ್ ಖಾನ್, ಆಯುಷ್ ಬದೋನಿ, ಕೈಲ್ ಮೇಯರ್ಸ್, ಕರಣ್ ಶರ್ಮಾ, ಎವಿನ್ ಲೂಯಿಸ್, ಮಯಾಂಕ್ ಯಾದವ್, ಬಿ ಸಾಯಿ ಸುದರ್ಶನ್.
PublicNext
22/03/2022 09:41 pm