ನವದೆಹಲಿ: ಬಹು ನಿರೀಕ್ಷಿತ 2022ರ ಐಪಿಎಲ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಘಾತ ಎದುರಾಗಿದೆ.
ಇಂಗ್ಲೆಂಡಿನ ಪೇಸ್ ಬೌಲರ್ ಮಾರ್ಕ್‌ವುಡ್ ಬಲಗೈ ಮಣಿಗಂಟಿನ ನೋವಿನಿಂದಾಗಿ ಐಪಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಅವರು ನೂತನ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರನಾಗಿದ್ದರು. ಐಪಿಎಲ್ ಮೆಗಾ ಆಕ್ಷನ್ನಲ್ಲಿ ನೂತನ ಲಕ್ನೋ ಫ್ರಾಂಚೈಸಿ 7.5 ಕೋಟಿ ನೀಡಿ ತಮ್ಮ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರಿಸಿಕೊಂಡಿತ್ತು.
2019 ವಿಶ್ವಕಪ್ ಗೆಲುವಿನ ತಂಡದ ಆಟಗಾರನಾಗಿದ್ದ ಮಾರ್ಕ್‌ವುಡ್ ಅವರ ಸ್ಥಾನಕ್ಕೆ ಮತ್ತೊಬ್ಬ ಆಟಗಾರನನ್ನು ಫ್ರಾಂಚೈಸಿ ಇನ್ನಷ್ಟೇ ಆಯ್ಕೆ ಮಾಡಬೇಕಿದೆ. ಇನ್ನು ಮಾರ್ಕ್‌ವುಡ್ ಅವರನ್ನು ರಿಪ್ಲೇಸ್ ಮಾಡೋ ಆಟಗಾರರ ಪಟ್ಟಿಯಲ್ಲಿ ಆಂಡ್ರ್ಯೂ ಟೈ, ಜೇಡನ್ ಸೀಲ್ಸ್, ಬ್ಲೆಸಿಂಗ್ ಮುಝರಬಾನಿ ಹೆಸರು ಮುಂಚೂಣಿಯಲ್ಲಿದೆ.
PublicNext
19/03/2022 06:59 pm