ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೇ ಓವರ್‌ನಲ್ಲಿ 7 ಬಾಲ್ ಎಸೆದ ಪಾಕ್ ಆಟಗಾರ್ತಿ !

ನ್ಯೂಜಿಲೆಂಡ್: ಮಹಿಳಾ ಏಕ ದಿನ ವಿಶ್ವಕಪ್ ನಲ್ಲಿ ಒಂದು ಎಡವಟ್ಟಾಗಿದೆ. ಅಂಪೈರ್ ಮಾಡಿದ ಪ್ರಮಾದದಿಂದಲೇ ಪಾಕಿಸ್ತಾನದ ಬೌಲರ್ ಒಂದೇ ಓವರ್‌ನಲ್ಲಿ 6 ರ ಬದಲು 7 ಎಸೆತ ಹಾಕಿದ್ದಾರೆ. ಈಗ ಈ ವಿಷಯವೇ ಅತಿ ಹೆಚ್ಚು ಚರ್ಚೆ ಆಗುತ್ತಿದೆ.

ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ್ ಮಧ್ಯೆ ನಡೆದ ಪಂದ್ಯದಲ್ಲಿಯೇ ಈ ಎಡವಟ್ಟಾಗಿದೆ. ಪಾಕಿಸ್ತಾನದ ಬೌಲರ್ ಒಮೈಮಾ ಸೋಹೈಲ್ ಪಂದ್ಯದ 27ನೇ ಓವರ್ ಹಾಕುವಾಗಲೇ ಬರೋಬ್ಬರಿ 7 ಬಾಲ್ ಗಳನ್ನು ಎಸೆದರು. ಈ ಓವರ್‌ ಕೊನೆಯ ಎಸೆತದಲ್ಲಿಯೇ ದಕ್ಷಿಣ ಆಫ್ರಿಕಾದ ಸುನೆ ಲಾಸ್ ಎಲ್ಬಿಡಬ್ಲೂಗೆ ಔಟ್ ಆದರು. ಆದರೆ ಅಂಪೈರ್ ಈ ತಪ್ಪು ಎಣಿಕೆಯಿಂದಲೇ ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಆದರೂ ಸಹ ದಕ್ಷಿಣ ಆಫ್ರಿಕಾ ಗೆದ್ದು ಬೀಗಿದ್ದು, ದಕ್ಷಿಣ ಆಫ್ರಿಕಾ 50 ಓವರ್‌ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 223 ರನ್‌ಗಳನ್ನ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ 49.5 ಓವರ್‌ ಗಳಲ್ಲಿ 217 ರನ್‌ ಗಳಿಸಿ ಸೋಲನುಭವಿಸಿದೆ.

Edited By :
PublicNext

PublicNext

12/03/2022 08:38 am

Cinque Terre

84.23 K

Cinque Terre

0

ಸಂಬಂಧಿತ ಸುದ್ದಿ