ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 15ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 26ರಿಂದ ಮುಂಬೈನ ವಾಂಖೆಡೆ ಮೈದಾನದಲ್ಲಿ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಚಾಲನೆ ಸಿಗಲಿದೆ. ಆದರೆ ಈವರೆಗೂ ತಮ್ಮ ನಾಯಕನನ್ನು ಘೋಷಿಸಲು ಉಳಿದಿರುವ ಏಕೈಕ ತಂಡ ಆರ್‌ಸಿಬಿ ಆಗಿದೆ. ಸದ್ಯ ನಾಯಕನ ಹೆಸರು ಘೋಷಣೆಯ ಸುಳಿವನ್ನು ಬೆಂಗಳೂರು ತಂಡವು ನೀಡಿದೆ.
ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡವು ಮಾರ್ಚ್ 12ರಂದು ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಮ್ಮ ಹೊಸ ನಾಯಕನನ್ನು ಘೋಷಿಸಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಆರ್‌ಸಿಬಿ, "ನಾಯಕತ್ವದ ಹೊಸ ಯುಗದ ಆರಂಭಕ್ಕೆ ದೊಡ್ಡ ಹಂತದ ಅಗತ್ಯವಿದೆ" ಎಂದು ಬರೆದುಕೊಂಡಿದೆ.
ಸದ್ಯ ಆರ್‌ಸಿಬಿ ಹಂಚಿಕೊಂಡಿರುವ ಕೆಲ ಕಟೌಟ್ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಅಭಿಮಾನಿಗಳು ಮುಂದಿನ ನಾಯಕ ಯಾರು ಎಂದು ತಿಳಿಸಿದ್ದಾರೆ. ಹಾಗಾದ್ರೆ ನೀವು ಕೂಡ ಮೇಲಿನ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿ ಆರ್‌ಸಿಬಿ ಮುಂದಿನ ನಾಯಕ ಯಾರು ಎಂದು ಕಮೆಂಟ್ ಮಾಡಿ.
PublicNext
08/03/2022 03:06 pm