ಬೆಂಗಳೂರು: ಕ್ರಿಕೆಟ್ ಲೋಕದಲ್ಲಿ ಟೆಸ್ ಪಂದ್ಯಗಳ ಜೋಶ್ ಬೇರೆ. ಏಕ ದಿನ ಪಂದ್ಯದ ಕಿಚ್ಚು ನಿಜಕ್ಕೂ ಒಂದು ಹುಚ್ಚೇ ಬಿಡಿ. T20 ಐಪಿಎಲ್ ಪಂದ್ಯದ ಖುಷಿ ನಿಜಕ್ಕೂ ಸೂಪರ್ ಡ್ಯೂಪರ್. ಆದರೆ ಇಲ್ಲಿವರೆಗೂ ಈ ಶ್ರೀಮಂತ ಐಪಿಎಲ್ ಪಂದ್ಯ ಬೆಂಗಳೂರಿನಲ್ಲಿ ಆಯೋಜಿಸಿಯೇ ಇಲ್ಲ. ಯಾಕೆ ಅನ್ನೋ ಪ್ರಶ್ನೆ ಈಗ ಎದ್ದಿದೆ.
ಐಪಿಎಲ್ ಅಂದ್ರೆ ಹಣ. ಹಣ ಅಂದ್ರೆ ಐಪಿಎಲ್. ಹೌದು. ಬಿಸಿಸಿಐನ ಈ ಪಂದ್ಯ ನಿಜಕ್ಕೂ ಶ್ರೀಮಂತ ಪಂದ್ಯವೇ ಆಗಿದೆ. ಈ ಸಲದ ಐಪಿಎಲ್ ಪಂದ್ಯಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಮುಂಬೈ,ಪುಣೆ ಹಾಗೂ ಅಹ್ಮದಾಬಾದ್ ನಲ್ಲೂ ಈ ಪಂದ್ಯಗಳ ಪ್ಲಾನ್ ಆಗಿವೆ. ಆದರೆ ಬೆಂಗಳೂರು ಹೆಸರು ಇಲ್ಲವೆ ಇಲ್ಲ.
ಯಾಕೆ ಅನ್ನೋ ಪ್ರಶ್ನೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಉತ್ತರ ಕೊಟ್ಟಿದ್ದಾರೆ. ಕಾರ್ಯಕ್ರಮವೊಂದಕ್ಕೆ ಬೆಂಗಳೂರಿಗೆ ಬಂದಿದ್ದ ಗಂಗೂಲಿ, ಇಲ್ಲಿಯ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಶಿಯೇಷನ್ ಈ ಬಗ್ಗೆ ಮನವಿ ಕೊಟ್ಟರೆ ಅದನ್ನ ಪರಿಶೀಲಿಸಬಹುದು ಅಂತಲೇ ಹೇಳಿದ್ದಾರೆ.ಹಾ...! ಇದಕ್ಕೆ ರಾಜ್ಯ ಸರ್ಕಾರದ ಸಮ್ಮತಿನೂ ಬೇಕೇಬೇಕು ಅಂತಲೇ ಹೇಳಿ ಬಿಟ್ಟಿದ್ದಾರೆ.
ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಬೇಕೆಂದ್ರೆ,ಕೆಎಸ್‌ಸಿಎ ಮುಂದೆ ಬರಬೇಕು. ಸರ್ಕಾರವು ಈ ನಿಟ್ಟಿನಲ್ಲಿ ಆಸಕ್ತಿ ತೋರಬೇಕಿದೆ. ಅಷ್ಟೆ.
PublicNext
04/03/2022 05:01 pm