ನವದೆಹಲಿ: ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಹಾಗೂ ಮುಂಚೂಣಿ ಆಟಗಾರ ರೋಹಿತ್ ಶರ್ಮಾ ಹೊಸ ಕಾರೊಂದನ್ನು ಖರೀದಿಸಿದ್ದಾರೆ. ಈ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಯಶಸ್ಸಿನ ಅಲೆಯಲ್ಲಿರುವ ರೋಹಿತ್ ಶರ್ಮಾ ಬರೋಬ್ಬರಿ 3ಕೋಟಿ 10 ಲಕ್ಷ ಬೆಲೆಯ ಕಾರು ಖರೀದಿಸಿದ್ದಾರೆ. ಲ್ಯಾಂಬೋರ್ಗಿನಿ ಕಂಪನಿಯ ಉರುಸ್ ಸೂಪರ್ ಕಾರು ಇದಾಗಿದೆ. ಬಲಗೈ ಬ್ಯಾಟ್ಸ್‌ಮನ್ 34 ವರ್ಷ ವಯಸ್ಸಿನ ರೋಹಿತ್ ಶರ್ಮಾ ಅವರ ಐಷಾರಾಮಿ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಈ ಕಾರಿನ ಸ್ಪೆಷಾಲಿಟಿ ಏನಪ್ಪ ಅಂದ್ರೆ...
ತಿಳಿ ನೀಲಿ ಬಣ್ಣದ ಈ ಕಾರಿಗೆ 22 ಇಂಚಿನ ಡೈಮಂಡ್ ಕಟ್ ಅಲಾಯ್ ರಿಮ್ ಇದೆ. ಆರಂಭದಲ್ಲೇ ಗಂಟೆಗೆ 200 ಕಿ.ಮೀ ವೇಗದ ಶಕ್ತಿ ಪಡೆಯುವ ಸಾಮರ್ಥ್ಯ ಇದೆ. 4.0 ಲೀಟರ್ ಟ್ವಿನ್ ವಿ 8 ಇಂಜಿನ್ ಅಳವಡಿಸಲಾಗಿದೆ. 650 ಪಿಎಸ್ ಗರಿಷ್ಠ ಪವರ್ ಮತ್ತು 850 ಎನ್‌ಎಮ್ ಟಾರ್ಕ್ ನೀಡಬಲ್ಲ ಶಕ್ತಿಶಾಲಿ ಹೈಸ್ಪೀಡ್ ವಾಹನ ಇದಾಗಿದೆ. ಈ ಸೂಪರ್ ಕಾರ್‌ನ ಇಂಟೀರಿಯರ್‌ನಲ್ಲಿ ಕೆಂಪು ಬಣ್ಣದ ಲೆದರ್ ಬಳಕೆ ಮಾಡಲಾಗಿದೆ. ಇದು ಕಾರಿನ ಒಳಭಾಗದಲ್ಲಿ ಆಕರ್ಷಕ ಲುಕ್ ಕೊಟ್ಟಿದೆ.
PublicNext
02/03/2022 02:06 pm