ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಣಜಿ ಟ್ರೋಫಿ ಕ್ರಿಕೆಟ್: ವಿಷ್ಣು ಸೋಳಂಕಿಗೆ ಪಿತೃವಿಯೋಗ : ಆಟ ಬಿಡದ ಪುತ್ರ

ವಡೋದರ (ಪಿಟಿಐ): ಇತ್ತೀಚೆಗಷ್ಟೇ ಪುತ್ರಿಯ ಸಾವಿನ ಶೋಕ ಅನುಭವಿಸಿದ್ದ ಬರೋಡಾ ಕ್ರಿಕೆಟ್ ತಂಡದ ಆಟಗಾರ ವಿಷ್ಣು ಸೋಳಂಕಿಗೆ ಇದೀಗ ಪಿತೃವಿಯೋಗ.

ಭಾನುವಾರ ಅವರ ತಂದೆ ನಿಧನರಾಗಿದ್ದಾರೆ. ಆದರೆ, ವಿಷ್ಣು ಅವರು ವಡೋದರಕ್ಕೆ ಬರುತ್ತಿಲ್ಲ. ಮೂರನೇ ಪಂದ್ಯ ಆಡಲು ನಿರ್ಧರಿಸಿರುವ ಅವರು ಬಯೋಬಬಲ್ ತೊರೆದು ಬರುತ್ತಿಲ್ಲ’ ಎಂದು ಬರೋಡಾ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅಜಿತ್ ಲೆಲೆ ತಿಳಿಸಿದ್ದಾರೆ.

ಫೆಬ್ರುವರಿ 10ರಂದು ಹೆಣ್ಣು ಮಗು ಕಳೆದುಕೊಂಡ ಅವರು ದುಃಖದ ನಡುವೆಯೂ ಟೂರ್ನಿಯ ಎರಡನೇ ಪಂದ್ಯದಲ್ಲಿ ಆಡಿ ಶತಕ ಬಾರಿಸಿದ್ದರು. ಸದ್ಯ ಪಂದ್ಯದ ಕೊನೆಯ ದಿನ ಭಾನುವಾರ ತಂದೆಯ ನಿಧನದ ಸುದ್ದಿ ಬಂದಿರುವುದು ನೋವಿನ ಸಂಗತಿ.

Edited By : Nirmala Aralikatti
PublicNext

PublicNext

28/02/2022 09:46 pm

Cinque Terre

35.93 K

Cinque Terre

1

ಸಂಬಂಧಿತ ಸುದ್ದಿ