ನವದೆಹಲಿ:ಐಪಿಎಲ್ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಅಂತಲೇ ಕರೆಸಿಕೊಳ್ಳುತ್ತಿದೆ. ಈ ಆಟದ ಮುಂದಿನ ಐದು ವರ್ಷದ ನೇರಪ್ರಸಾರ-ಡಿಜಿಟಲ್ ಹಕ್ಕು ಒಳಗೊಂಡ ಮಾಧ್ಯಮ ಹಕ್ಕು ಮಾರಾಟಕ್ಕೆ ಭಾರಿ ಪೈಪೋಟಿ ನಡೆದಿದೆ.
ಹೌದು.! ಈ ಒಂದು ಹಕ್ಕನ್ನ ಪಡೆಯೋಕೆ ದೊಡ್ಡ ದೊಡ್ಡ ಚಾನೆಲ್‌ಗಳೇ ಸಜ್ಜಾಗಿ ಬಿಟ್ಟಿವೆ. ಸ್ಟಾರ್,ಸೋನಿ ಪಿಕ್ಚರ್ಸ್ ನೆಟ್‌ವರ್ಕ್,ರಿಯಲ್ಸ್ ಇಂಡಸ್ಟ್ರೀಸ್‌ನ ವಿಯಾಕಾಮ್-18 ಮತ್ತು ಅಮೇಜಾನ್ ನಂತಹ ಕಂಪನಿಗಳೇ ಸಾಲಿನಲ್ಲಿವೆ. ಇದರಿಂದ ಬಿಸಿಸಿಐ ಖಜಾನೆಗೆ 50 ಸಾವಿರ ಕೋಟಿ ಹರಿದು ಬರೋ ನಿರೀಕ್ಷೆ ಇದೆ.
2023 ರಿಂದ 2027 ರ ವರೆಗಿನ 5 ವರ್ಷದ ಟೆಂಡರ್ ಕರೆಯಲು ಬಿಸಿಸಿಐ ಸಜ್ಜಾಗಿದೆ. ಇ-ಹರಾಜು ಪ್ರಕ್ರಿಯೆ ಮೂಲಕವೇ ಹಕ್ಕು ಮಾರಾಟಕ್ಕೆ ಸಿದ್ಧತೆ ನಡೆದಿದೆ.
PublicNext
23/02/2022 11:06 am