ಕ್ರಿಕೆಟ್ ಅನ್ನ ಜೆಂಟಲ್‌ಮನ್ ಗೇಮ್ ಅಂತಲೇ ಕರೆಯೋದು. ಅದೇ ನಂಬಿಕೆನೂ ಈಗಲೂ ಇದೆ. ಆದರೆ,ಪಾಕಿಸ್ತಾನ್ ಆಟಗಾರರ ಆಟದ ವೇಳೆ ಇದೆಲ್ಲ ಸುಳ್ಳು ಅನಿಸಿಬಿಡುತ್ತದೆ. ಅದಕ್ಕೆ ಸಾಕ್ಷಿ ಇಲ್ಲಿದೆ. ಬನ್ನಿ, ಹೇಳ್ತೀವಿ.
ಮೊನ್ನೆ ಸೋಮವಾರ ಪಾಕಿಸ್ತಾನ್ ಸೂಪರ್ ಲೀಗ್ (PSL)ನ ಲಾಹೋರ್ ಖಲಂದರ್ಸ್ ಮತ್ತು ಪೇಶಾವರ್ ಝಲ್ಮಿ ಮ್ಯಾಚ್ ಇತ್ತು. ಇದೇ ವೇಳೆನೆ ಲಾಹೋರ್ ಖಲಂದರ್ಸ್ ತಂಡದ ಬೌಲರ್ ಹ್ಯಾರಿಸ್ ರೌಫ್, ಪೇಶಾವರ ತಂಡದ ಬ್ಯಾಟರ್ ಹರ್ಜತುಲ್ಲಾ ಝಝಾಯ್‌ಗೆ ಬಾಲ್ ಹಾಕಿದರು. ಆದರೆ ಈ ಕ್ಯಾಚ್ ಅನ್ನ ಕಮ್ರಾನ್ ಗುಲಾಮ್ ಡ್ರಾಪ್ ಮಾಡಿದರು.
ಇದೇ ಸಿಟ್ಟಿನಲ್ಲಿಯೇ ಇದ್ದ ಹ್ಯಾರಿಸ್, ಮತ್ತೊಂದು ಓವರ್ ನಲ್ಲಿಯೇ ವಿಕೆಟ್ ತೆಗೆದೆ ಬಿಟ್ಟರು. ಆಗ ಕಮ್ರಾನ್ ಗುಲಾಮ್ ,ಹ್ಯಾರಿಸ್ ಗೆ ವಿಶ್ ಮಾಡಲು ಮುಂದೆ ಬಂದ್ರು ನೋಡಿ,ಹಿಂದೆ ಮುಂದೆ ನೋಡದೇನೆ ಹ್ಯಾರಿಸ್ ರೌಫ್, ತಮ್ಮ ತಂಡದ ಫೀಲ್ಡರ್ ಕಮ್ರಾನ್ ಗುಲಾಮ್ ಗೆ ಕಪಾಳಕ್ಕೆ ಹೊಡೆದೆ ಬಿಟ್ಟರು. ಇದಕ್ಕೆ ಕಮ್ರಾನ್ ಮುಗುಳು ನಗೆಯಲ್ಲಿಯೇ ಪ್ರತಿಕ್ರಿಯೆ ಕೊಟ್ಟು ಸುಮ್ಮನಾದರು. ಆದರೆ ಈ ವೀಡಿಯೋ ಮಾತ್ರ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇದೆ.
PublicNext
22/02/2022 11:39 am