ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್ ಹಾರಾಜು 2022: ಶಕೀಬ್ ಅಲ್ ಹಸನ್ ಆಯ್ಕೆ ಆಗದಿರುವ ಬಗ್ಗೆ ಪತ್ನಿ ಕೊಟ್ಟ ಕಾರಣಗಳು

ಢಾಕಾ: 2022ರ ಐಪಿಎಲ್ ಹರಾಜಿನಲ್ಲಿ ಸ್ಟಾರ್ ಆಲ್‌ರೌಂಡರ್, ಬಾಂಗ್ಲಾ ಆಟಗಾರ ಶಕೀಬ್ ಅಲ್ ಹಸನ್ ಬಗ್ಗೆ ಅವರ ಪತ್ನಿ ಉಮ್ಮೆ ಅಹ್ಮದ್ ಶಿಶಿರ್ ಅವರು ಮೆಗಾ ಹರಾಜಿನಲ್ಲಿ ಮಾರಾಟವಾಗದಿರುವ ಬಗ್ಗೆ ಕೆಲವು ಕಾರಣಗಳನ್ನು ಹೇಳಿದ್ದಾರೆ.

ಶ್ರೀಲಂಕಾ ಸರಣಿಯಿಂದ ಹೊರಗುಳಿದೂ ಐಪಿಎಲ್‌ನಲ್ಲಿ ಆಡಲು ಬಯಸಿದರೆ ಶಕೀಬ್ ಅದನ್ನು ಮಾಡಬಹುದಿತ್ತು ಆದರೆ ಹಣಕ್ಕಿಂತ ಹೆಚ್ಚಾಗಿ ದೇಶಕ್ಕಾಗಿ ಆಡುವುದನ್ನು ಅವರು ಗೌರವವೆಂದು ಪರಿಗಣಿಸಿದ್ದಾರೆ. ಹರಾಜಿನಲ್ಲಿ ಮಾರಾಟವಾಗದಿರುವುದು ದೊಡ್ಡ ತಪ್ಪಲ್ಲ ಮತ್ತು ಶಕೀಬ್‌ಗೆ ಇನ್ನೂ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ ಎಂದು ಪತಿಗೆ ಬೆಂಬಲವಾಗಿ ಪತ್ನಿ ಉಮ್ಮೆ ಹೇಳಿದ್ದಾರೆ.

ಬಾಂಗ್ಲಾದೇಶ ಮಾರ್ಚ್ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಮಾರ್ಚ್ 18 ರಿಂದ ಪ್ರಾರಂಭವಾಗುವ ಪ್ರವಾಸದಲ್ಲಿ ಬಾಂಗ್ಲಾದೇಶ ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದಕ್ಕೂ ಮೊದಲು 2021ರ ಐಪಿಎಲ್ ಸೀಸನ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಶಕೀಬ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಈ ಕಾರಣಗಳಿಂದ ಹರಾಜು ಪ್ರಕ್ರಿಯೆಯಲ್ಲಿ ಶಕೀಬ್‌ಗೆ ಬೇಡಿಕೆ ಬಂದಿರಲಿಲ್ಲ ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

16/02/2022 01:56 pm

Cinque Terre

56.99 K

Cinque Terre

1