ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ಹೊಸ ಅಹಮದಾಬಾದ್ ಫ್ರಾಂಚೈಸಿಯು ತನ್ನ ಅಧಿಕೃತ ಹೆಸರನ್ನು ಘೋಷಣೆ ಮಾಡಿದೆ.
ಇತ್ತೀಚೆಗೆ ಲಕ್ನೋ ಸೂಪರ್‌ಜಾಯಿಂಟ್ಸ್ ತನ್ನ ಹೆಸರನ್ನ ಘೋಷಣೆ ಮಾಡಿತ್ತು. ಈಗ ನೂತನ ಐಪಿಎಲ್ ಫ್ರಾಂಚೈಸಿ ಅಹಮದಾಬಾದ್ ತನ್ನ ತಂಡದ ಹೆಸರನ್ನು 'ಅಹಮದಾಬಾದ್ ಟೈಟನ್ಸ್' ಎಂದು ತಿಳಿದು ಬಂದಿದೆ.
ಅಹಮದಾಬಾದ್ ಮೂಲದ ಫ್ರಾಂಚೈಸಿಯೊಂದಿಗೆ ನಡೆಯುತ್ತಿರುವ ವಿವಾದದಿಂದಾಗಿ, ಮೆಗಾ ಹರಾಜನ್ನು ಫೆಬ್ರವರಿ ಎರಡನೇ ವಾರಕ್ಕೆ ಮುಂದೂಡಬೇಕಾಯಿತು. ಐಪಿಎಲ್ 2022ಕ್ಕೆ ಬಿಸಿಸಿಐ 2 ಹೊಸ ತಂಡಗಳನ್ನು ಸೇರಿಸಿದ್ದು, ಇದರಲ್ಲಿ ಸಂಜೀವ್ ಗೋಯೆಂಕಾ ಅವರ ಆರ್‌ಪಿಎಸ್‌ಜಿ ಗ್ರೂಪ್ 7090 ಕೋಟಿ ರೂ. ಖರ್ಚು ಮಾಡಿ ಲಕ್ನೋ ತಂಡವನ್ನು ಖರೀದಿಸಿದ್ದರೆ, ಅಮೆರಿಕದ ಸಿವಿಸಿ ಕ್ಯಾಪಿಟಲ್ ಅಹಮದಾಬಾದ್ ಫ್ರಾಂಚೈಸಿಯನ್ನು 5,625 ಕೋಟಿಗೆ ಖರೀದಿಸಿದೆ.
PublicNext
07/02/2022 04:57 pm