ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022ಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗುರುವಾರ ಭಾರತ ಮಹಿಳಾ ತಂಡದ 15 ಆಟಗಾರರ ಹೆಸರನ್ನು ಪ್ರಕಟ ಮಾಡಿದೆ.
ಮಿಥಾಲಿ ರಾಜ್ ನಾಯಕಿಯಾಗಿದ್ದಾರೆ. ಹರ್ಮನ್ ಪ್ರೀತ್ ಕೌರ್ ಉಪ ನಾಯಕಿಯಾದರೆ, ಸ್ಟಾರ್ ಬ್ಯಾಟರ್ ಜಮಿಯಾ ರೊಡ್ರಿಗಸ್ ಮತ್ತು ಸ್ಟಾರ್ ಬೌಲರ್ ಶಿಖಾ ಪಾಂಡೆ ಅವರನ್ನು ಕೈಬಿಟ್ಟಿದ್ದು ಅಚ್ಚರಿ ಮೂಡಿಸಿದೆ.
ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಗೆ ಸ್ಥಾನ ನೀಡಲಾಗಿದೆ. ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಇದೇ ಮಾರ್ಚ್ 4 ರಿಂದ ಆರಂಭವಾಗಲಿದ್ದು ಏಪ್ರಿಲ್ 3 ರ ವರೆಗೆ ನ್ಯೂಜಿಲೆಂಡ್ ನಲ್ಲಿ ನಡೆಯಲಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ವಿಶ್ವಕಪ್ 2022ಕ್ಕೆ ಭಾರತ ತಂಡ:
ಮಿಥಾಲಿ ರಾಜ್ (ನಾಯಕಿ), ಹರ್ಮನ್ ಪ್ರೀತ್ ಕೌರ್ (ಉಪ ನಾಯಕಿ), ಸ್ಮೃತಿ ಮಂದಾನ, ಶಫಾಲಿ ವರ್ಮಾ, ಯಸ್ತಿಕಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಮೆಘನಾ ಸಿಂಗ್, ರೇಣುಕಾ ಸಿಂಗ್ ಥಾಕೂರ್, ತನಿಯಾ ಭಾಟಿಯ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಪೂನಂ.
ಸ್ಟ್ಯಾಂಡ್ ಬೈ ಆಟಗಾರರು: ಎಸ್. ಮೇಘನಾ, ಏಖ್ತಾ ಬಿಸ್ತ್, ಸಿಮ್ರಾನ್ ದಿಲ್ ಬಹದ್ದೂರ್.
ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯಕ್ಕೆ ಭಾರತ ತಂಡ:
ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪ ನಾಯಕಿ), ಶಫಾಲಿ ವರ್ಮಾ, ಯಸ್ತಿಕಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣ, ಪೂಜಾ ವಸ್ತ್ರಾಕರ್, ಮೆಘನಾ ಸಿಂಗ್, ರೇಣುಕಾ ಸಿಂಗ್ ಥಾಕೂರ್, ತನಿಯಾ ಭಾಟಿಯ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಪೂನಂ, ಎಸ್. ಮೇಘನಾ, ಏಖ್ತಾ ಬಿಸ್ತ್, ಸಿಮ್ರಾನ್ ದಿಲ್ ಬಹದ್ದೂರ್.
ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಾರ್ಚ್ 6 ರಂದು ಎದುರಿಸಲಿದೆ.
ಭಾರತದ ವೇಳಾಪಟ್ಟಿ
ಮಾ.6, ಭಾರತ vs ಪಾಕಿಸ್ತಾನ
ಮಾ.10, ಭಾರತ vs ನ್ಯೂಜಿಲೆಂಡ್
ಮಾ.12, ಭಾರತ vs ವೆಸ್ಟ್ ಇಂಡೀಸ್
ಮಾ.16, ಭಾರತ vs ಇಂಗ್ಲೆಂಡ್
ಮಾ.19, ಭಾರತ vs ಆಸ್ಟ್ರೇಲಿಯಾ
ಮಾ.22, ಭಾರತ vs ಬಾಂಗ್ಲಾದೇಶ
ಮಾ.27, ಭಾರತ vs ದಕ್ಷಿಣ ಆಫ್ರಿಕಾ
PublicNext
06/01/2022 02:26 pm