ಕಪಿಲ್ ದೇವ್ ಒಬ್ಬ ಅತ್ಯದ್ಭುತ ಸಾಧಕ. ತನ್ನ ತಾನು ನಂಬಿ ಮುನ್ನಡೆದ ಮಹಾನ್ ಸಾಹಸಿ. ನನ್ನ ಜೀವನದಲ್ಲಿ ನಾ ಕಂಡ ವಿಶೇಷ ವ್ಯಕ್ತಿ. ಅದು ಕಪಿಲ್ ದೇವ. ಹೀಗಂತ ಮಾಜಿ ಕ್ರಿಕೆಟರ್ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಕಪಿಲ್ ದೇವ್ ರನ್ನ ತಮ್ಮದೇ ಶೈಲಿಯಲ್ಲಿ ಬಣ್ಣಿಸಿದ್ದಾರೆ.
ಕಪಿಲ್ ದೇವ್ ಒಬ್ಬ ಸಕಾರಾತ್ಮಕ ವ್ಯಕ್ತಿ.ತನ್ನಲ್ಲಿ ನಂಬಿಕೆ ಇಟ್ಟು ಆ ನಂಬಿಕೆಯನ್ನ ಇತರರಿಗೂ ಹಂಚುವ ವಿಶೇಷ ವ್ಯಕ್ತಿ.ಒಂದು ಮ ರ ಹಣ್ಣು ಬಿಡಬೇಕು ಅಂದ್ರೆ ಅದರ ಬೇರು ಗಟ್ಟಿ ಇರಬೇಕು. ಕಪಿಲ್ ದೇವ್ ಒಂದು ಫಲ ನೀಡುವ ಮರದ ಒಂದು ಗಟ್ಟಿ ಬೇರು ಅಂತಲೇ ಬಣ್ಣಿಸಿದ್ದಾರೆ ನವಜೋತ್ ಸಿಂಗ್ ಸಿಧು.
ನನ್ನ ಮೊದಲ ಟೆಸ್ಟ್ ಪಂದ್ಯ ಅಹಮದಾಬಾದ್ ನಲ್ಲಿತ್ತು. ವೆಸ್ಟ್ ಇಂಡೀಸ್ ವಿರುದ್ಧ ಈ ಪಂದ್ಯದಲ್ಲಿ ಕಪಿಲ್ ದೇವ್ ಬರೋಬ್ಬರಿ 09 ವಿಕೆಟ್ ಪಡೆದರು. ಆಗ ಈ ಸುದ್ದಿ ಎಲ್ಲೆಡೆ ಹರಡಿತ್ತು. ಇಡೀ ಜಗತ್ತೇ ಅಹ್ಮದಾಬಾದ್ ನತ್ತ ತಿರುಗಿ ನೋಡಿತ್ತು. ನಾಲ್ಕು ನೂರಕ್ಕೂ ಹೆಚ್ಚು ಇಂಗ್ಲೀಷ್ ಪತ್ರಕರ್ತರೂ ಇಲ್ಲಿಗೆ ಬಂದಿದ್ದರು. ಆದರೆ ಕಪಿಲ್ ದೇವ್ ಅವರಿಗೆ ಇಂಗ್ಲೀಷ್ ಆಗ ಬರ್ತಾನೇ ಇರಲಿಲ್ಲ. ಅವರು ಇಂಗ್ಲಿಷ್ ಮಾತನಾಡಿದ್ರೆ ಅದರ ಕೊಲೆನೇ ಮಾಡ್ತಾರೆ.
ಆದರೂ ಕಪಿಲ್ ಇಂಗ್ಲೀಷ್ ಮಾತನಾಡಿದರು. ಪತ್ರಕರ್ತರ ಗ್ಯಾಲರಿಯಿಂದ ಒಂದು ಪ್ರಶ್ನೆ ಕೂಡ ತೂರಿ ಬಂತು. ಈ ಪತ್ರಿಕಾ ಗೋಷ್ಠಿಯಲ್ಲಿ ಸಿಧು ಕೂಡ ಒಂದು ಕಡೆಗೆ ನಿಂತಿದ್ದರು. ಆಗಲೇ ಇಂಡಿಯಾ ಯಾಕೆ ಮತ್ತೊಬ್ಬ ಫಾಸ್ಟ್ ಬೌಲರ್ ಕಪಿಲ್ ನನ್ನ ಹುಟ್ಟುಹಾಕಲು ಸಾಧ್ಯವಿಲ್ಲ ಅಂತಲೇ ಕೇಳಿದರು.
ಈ ಪ್ರಶ್ನೆಯನ್ನ ಚೆನ್ನಾಗಿ ಆಲಿಸಿದ ಕಪಿಲ್ ದೇವ್,ನಮ್ಮ ತಂದೆ ತೀರಿ ಹೋಗಿದ್ದಾರೆ. ಅಮ್ಮನಿಗೆ ವಯಸ್ಸಾಗಿದೆ. ಅದಕ್ಕೇ ಮತ್ತೊಬ್ಬ ಕಪಿಲ್ ಹುಟ್ಟಿಸಲು ಸಾಧ್ಯವಿಲ್ಲ ಅಂತಲೇ ಹೇಳಿದರು. ಈ ಒಂದು ಪ್ರಸಂಗವನ್ನ ಸಿಧು ಈಗ ಅಚೀವರ್ ಕ್ಲಬ್ ನ ವಿಶೇಷ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಮತ್ತು ಕಪಿಲ್ ಬಾಂಡಿಂಗ್ ಹೇಗಿತ್ತು ಅಂತಲೂ ಸಿಧು ವಿವರಿಸಿದ್ದಾರೆ.
PublicNext
02/01/2022 04:25 pm