ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 113 ರನ್‌ ಗಳ ಐತಿಹಾಸಿಕ ಗೆಲುವು

ಸೆಂಚ್ಯುರಿಯನ್:ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 113 ರನ್‌ ಗಳ ಭರ್ಜರಿ ಗೆಲುವು ಸಾಧಿಸಿದೆ.

ಕೊನೆ ದಿನದ ಆಟದಲ್ಲಿ ದಕ್ಷಿಣ ಆಫ್ರಿಕಾ ತಂಡ,211 ರನ್‌ ಗಳ ಗುರಿಯನ್ನ ತಲುಪಬೇಕಿತ್ತು. ಆದರೆ ಟೀಮ್ ಇಂಡಿಯಾ 2ನೇ ಇನ್ನಿಂಗ್ಸ್ ನಲ್ಲಿಯೇ ಆಲ್ ಔಟ್ ಮಾಡಿತು.

ಈ ಮೂಲಕ ಮೂರು ಪಂದ್ಯಗಳ ಈ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮೂಲಕ ಮುನ್ನಡೆ ಸಾಧಿಸಿದೆ.

ಸೆಂಚ್ಯುರಿಯನ್ ಸ್ಪೋರ್ಟ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೆ.ಎಲ್‌.ರಾಹುಲ್ 123 ರನ್‌ ಗಳ ಭರ್ಜರಿ ಶತಕ ಬಾರಿಸಿದ್ದರಿಂದಲೇ ಟೀಂ ಇಂಡಿಯಾ 327 ಗಳನ್ನ ಗಳಿಸಲು ಸಾಧ್ಯವಾಗಿರೋದು.

ಆದರೆ ದಕ್ಷಿಣ ಆಫ್ರಿಕಾ ಮೊಹಮ್ಮದ್ ಶಮಿ ಮಾರಕ ದಾಳಿಗೆ ತತ್ತರಿಸಿತು.ವಿಕೆಟ್‌ಗಳನ್ನ ಉರುಳಿಸಿದ ಶಮಿ ಆಫ್ರಿಕಾ ತಂಡವನ್ನ ಕೇವಲ 197 ರನ್ನ ಗಳಿಗೆ ನಿಯಂತ್ರಿಸಿದರು.

ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ನಲ್ಲಿ 174 ರನ್‌ಗಳಿಗೆ ಆಲ್ ಔಟ್ ಆಯಿತು.ಎರಡನೇ ಇನ್ನಿಂಗ್ಸ್ ಗೆ ಭಾರತ ದಕ್ಷಿಣ ಆಫ್ರಿಕಾಗೆ 305 ರನ್‌ಗಳ ಟಾರ್ಗೆಟ್ ನೀಡಿತು. ಕೊನೆ ದಿನದ ಆಟದಲ್ಲಿ ದಕ್ಷಿಣ ಆಫ್ರಿಕಾ 211 ರನ್‌ಗಳ ಗುರಿ ಪಡೆಯಿತು. ಆದರೆ ಈ ಕೊನೆ ದಿನದ ಆಟದಲ್ಲಿ ಟೀಂ ಇಂಡಿಯಾ ಆಟಗಾರರು 6 ವಿಕೆಟ್ ಉರುಳಿಸಿ ಭಾರತಕ್ಕೆ 113 ರನ್‌ಗಳ ಐತಿಹಾಸಿಕ ಗೆಲುವು ತಂದು ಕೊಟ್ಟರು.

Edited By :
PublicNext

PublicNext

30/12/2021 04:55 pm

Cinque Terre

32.33 K

Cinque Terre

5

ಸಂಬಂಧಿತ ಸುದ್ದಿ