ದುಬೈ: ಬಹು ನಿರೀಕ್ಷಿತ ಐಸಿಸಿ 2022ರ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟವಾಗಿದ್ದು, ನ್ಯೂಜಿಲೆಂಡ್‌ನಲ್ಲಿ 2022ರ ಮಾರ್ಚ್ 4ರಿಂದ ಟೂರ್ನಿ ಆರಂಭವಾಗಲಿದೆ. ಈ ಕದನದಲ್ಲಿ ಭಾರತದ ವನಿತೆಯರು ತಮ್ಮ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದ್ದಾರೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಮಾರ್ಚ್ 5ರಂದು ಸೆಣೆಸಿದರೆ, ಮಾರ್ಚ್ 6ರಂದು ಭಾರತ-ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. 8 ತಂಡಗಳು ಭಾಗವಹಿಸುವ ಟೂರ್ನಿಯಲ್ಲಿ ಭಾರತವು ಮಾರ್ಚ್ 6ರಂದು ಪಾಕಿಸ್ತಾನ, ಮಾರ್ಚ್ 10ರಂದು ನ್ಯೂಜಿಲ್ಯಾಂಡ್, ಮಾರ್ಚ್ 12ರಂದು ವೆಸ್ಟ್ ಇಂಡೀಸ್, ಮಾರ್ಚ್ 16ರಂದು ಇಂಗ್ಲೆಂಡ್, 19ರಂದು ಆಸ್ಟ್ರೇಲಿಯಾ, 22ರಂದು ಬಾಂಗ್ಲಾದೇಶ ಮತ್ತು 27ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ.
31 ದಿನಗಳಲ್ಲಿ 31 ಪಂದ್ಯಗಳು ನಡೆಯಲಿದ್ದು, 8 ತಂಡಗಳು ವಿಶ್ವಕಪ್ ಗೆಲ್ಲಲು ಸೆಣೆಸಲಿವೆ. ನ್ಯೂಜಿಲೆಂಡ್ನ ಆಕ್ಲೆಂಡ್, ಕ್ರೈಸ್ಟ್‌ಚರ್ಚ್, ಡ್ಯುನೆಡಿನ್, ಹ್ಯಾಮಿಲ್ಟನ್, ಟೌರಂಗಾ ಮತ್ತು ವೆಲ್ಲಿಂಗ್‌ಟನ್ ಗಳಲ್ಲಿ ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿದೆ.
PublicNext
15/12/2021 07:59 pm