ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆಯಿಂದಾಗಿ ಪಂದ್ಯ ರದ್ದು: ಮೈದಾನದಲ್ಲಿ ಆಲ್ ರೌಂಡರ್ ಮಸ್ತಿ

ಢಾಕಾ : ಅಕಾಲಿಕ ಮಳೆ ಎಲ್ಲರಿಗೂ ತೊಂದರೆ ಕೊಡುತ್ತಿದೆ. ಇದಕ್ಕೆ ಕ್ರಿಕೆಟ್ ಕೂಡಾ ಹೊರತಾಗಿಲ್ಲ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಭಾನುವಾರ ನಡೆಯುತ್ತಿದ್ದ ಎರಡನೇ ಟೆಸ್ಟ್ ಪಂದ್ಯದ 2ನೇ ದಿನದಾಟಕ್ಕೆ ಮಳೆರಾಯ ಅಡ್ಡಿಪಡಿಸಿ ಪಂದ್ಯ ರದ್ದುಗೊಳಿಸಲಾಯಿತು.

ಈ ವೇಳೆ ಬಾಂಗ್ಲಾದೇಶದ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಮಳೆಯಲ್ಲೇ ಮೋಜು ಮಸ್ತಿ ಮಾಡಿದ್ದಾರೆ. ಮಳೆಯಿಂದಾಗಿ, ವಿಕೆಟ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ಕವರ್ ಗಳಿಂದ ಮುಚ್ಚಲಾಗಿತ್ತು. ಮಳೆಯ ರಭಸಕ್ಕೆ ಕವರ್ ಗಳ ಮೇಲೂ ನೀರು ಶೇಖರಣೆಯಾಗಿರುವುದನ್ನು ನೋಡಿದ ಶಕೀಬ್ ವಾಟರ್ ಸ್ಲೈಡ್ ಮಾಡುತ್ತಾ ಸಮಯ ಎಂಜಾಯ್ ಮಾಡಿದ್ದಾರೆ.

ಇನ್ನೊಂದೆಡೆ ಪಂದ್ಯ ರದ್ದಾದ ಕಾರಣ ಅತ್ತ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಡ್ರೆಸ್ಸಿಂಗ್ ರೂಮ್ ನಲ್ಲಿ ಸಹ ಆಟಗಾರರೊಂದಿಗೆ ಸಿಲ್ಲಿ ಕ್ರಿಕೆಟ್ ಆಡಿದರು. ಇದೀಗ ಈ ಇಬ್ಬರು ಸ್ಟಾರ್ ಆಟಗಾರರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Edited By : Nirmala Aralikatti
PublicNext

PublicNext

06/12/2021 03:11 pm

Cinque Terre

34.59 K

Cinque Terre

0

ಸಂಬಂಧಿತ ಸುದ್ದಿ