ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎನ್‌ಸಿಎ ಲಕ್ಷ್ಮಣ್ ಮುಖ್ಯಸ್ಥ- ಡಿ.13ಕ್ಕೆ ಪದಗ್ರಹಣ

ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ) ಮುಖ್ಯಸ್ಥರಾಗಿ ಡಿಸೆಂಬರ್ 13ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಬಿಸಿಸಿಐ ವಾರ್ಷಿಕ ಮಹಾಸಭೆ ನಿನ್ನೆ (ಶನಿವಾರ) ನಡೆದಿತ್ತು. ಈ ಸಭೆಯಲ್ಲಿ ಎನ್‍ಸಿಎ ಮುಖ್ಯಸ್ಥರ ಅಧಿಕಾರ ಸ್ವೀಕಾರ ಡಿ.13ರಂದು ನಡೆಯಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಸಭೆಯಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಚರ್ಚೆ ನಡೆದಿದ್ದು, ಸರಣಿ ಮುಂದೂಡಲು ತೀರ್ಮಾನಿಸಲಾಗಿದೆ ಎಂದು ಆಪ್ತ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ.

ಬೆಂಗಳೂರಿನಲ್ಲಿ ಎನ್‍ಸಿಎ ಮುಖ್ಯಸ್ಥರಾಗಿ ದ್ರಾವಿಡ್ ಸೇವೆಸಲ್ಲಿಸುತ್ತಿದ್ದರು. ಇದೀಗ ಅವರು ರಾಷ್ಟ್ರೀಯ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದರಿಂದ ತೆರವುಗೊಂಡಿರುವ ಎನ್‍ಸಿಎ ಮುಖ್ಯಸ್ಥ ಸ್ಥಾನಕ್ಕೆ ಲಕ್ಷ್ಮಣ್ ನೇಮಕಗೊಂಡಿದ್ದು, ಲಕ್ಷ್ಮಣ್ ಬಿಸಿಸಿಐ ಜೊತೆ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ. ಡಿ.13 ರಂದು ಕೋಚಿಂಗ್ ಸಿಬ್ಬಂದಿಯೊಂದಿಗೆ ಬೆಂಗಳೂರಿಗೆ ಆಗಮಿಸಿ ಅಧಿಕಾರ ಪಡೆಯಲಿದ್ದಾರೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ.

ಆಸ್ಟ್ರೇಲಿಯ ಹಾಗೂ ಇಂಗ್ಲೆಂಡಿನ ಮಾಜಿ ಬೌಲಿಂಗ್‌ ಕೋಚ್‌ ಟ್ರಾಯ್‌ ಕೂಲಿ ಎನ್‌ಸಿಎಯ ಪೇಸ್‌ ಬೌಲಿಂಗ್‌ ಕೋಚ್‌ ಆಗಿದ್ದು, ಅವರು ಡಿ. 13ರಂದು ಬೆಂಗಳೂರು ತಲುಪಲಿದ್ದಾರೆ.

Edited By : Vijay Kumar
PublicNext

PublicNext

05/12/2021 10:48 am

Cinque Terre

47.25 K

Cinque Terre

0