ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL: ಅಂದು 1 ಕೋಟಿ, ಈಗ 12 ಕೋಟಿ- ಈ ಆವೃತ್ತಿಯಲ್ಲಿ ಹೆಚ್ಚು ಹಣ ಪಡೆದ 5 ಆಟಗಾರರು

ನವದೆಹಲಿ: ಮೆಗಾ ಹರಾಜಿಗೂ ಮುನ್ನ ಸದ್ಯ ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳಿಗೆ ತಂಡದಲ್ಲಿ ಯಾರಾದರೂ ನಾಲ್ವರು (ಗರಿಷ್ಠ) ಆಟಗಾರರನ್ನು ಉಳಿಸಿಕೊಳ್ಳುವ ಅನುಮತಿಯನ್ನು ಬಿಸಿಸಿಐ ನೀಡಿತ್ತು. ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಕಡಿಮೆ ಮೊತ್ತ ಗಳಿಸಿದ್ದ ಕೆಲ ಆಟಗಾರರು ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಗೆ ಒಳಗಾಗುವುದರ ಮೂಲಕ ಹೆಚ್ಚಿನ ಮೊತ್ತವನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ. ಹೀಗೆ ಕಳೆದ ಆವೃತ್ತಿಯಲ್ಲಿ ಕಡಿಮೆ ಮೊತ್ತ ಪಡೆದು ಈ ಬಾರಿ ಅದಕ್ಕಿಂತ ಹೆಚ್ಚಿನ ಮೊತ್ತ ಪಡೆದಿರುವ ಐವರು ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

ಮಯಾಂಕ್ ಅಗರ್ವಾಲ್: 2018ರಲ್ಲಿ 1 ಕೋಟಿ ನೀಡಿ ಮಯಾಂಕ್ ಅಗರ್ವಾಲ್ ಅವರನ್ನು ಖರೀದಿಸಿದ್ದ ಪಂಜಾಬ್ ಕಿಂಗ್ಸ್ ಈ ಬಾರಿ ಅವರನ್ನು ತಂಡದಲ್ಲಿಯೇ ಉಳಿಸಿಕೊಳ್ಳಲು ಬರೋಬ್ಬರಿ 12 ಕೋಟಿ ರೂ. ನೀಡುತ್ತಿದೆ.

ಅರ್ಷದೀಪ್ ಸಿಂಗ್: 2019ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪದಾರ್ಪಣೆ ಮಾಡಿದ್ದ ಅರ್ಷದೀಪ್ ಸಿಂಗ್ 20 ಲಕ್ಷ ಸಂಭಾವನೆ ಪಡೆದಿದ್ದರು. ಆದರೆ ಈ ಬಾರಿ ಪಂಜಾಬ್ ಕಿಂಗ್ಸ್ ಅರ್ಷದೀಪ್ ಅವರನ್ನು ರಿಟೈನ್ ಮಾಡಿಕೊಳ್ಳಲು 4 ಕೋಟಿ ರೂ. ಘೋಷಣೆ ಮಾಡಿದೆ.

ಅಬ್ದುಲ್ ಸಮದ್: ಜಮ್ಮು ಕಾಶ್ಮೀರದ ಆಲ್ ರೌಂಡರ್ ಆಟಗಾರ ಅಬ್ದುಲ್ ಸಮದ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 20 ಲಕ್ಷ ರೂ. ನೀಡಿ ಖರೀದಿಸಿತ್ತು. ಆದರೆ ಇದೀಗ ಇದೇ ಆಟಗಾರನನ್ನು ಉಳಿಸಿಕೊಳ್ಳಲು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 4 ಕೋಟಿ ರೂ. ಹೂಡಿಕೆ ಮಾಡಿದೆ.

ಋತುರಾಜ್ ಗಾಯಕ್ವಾಡ್: ಆರಂಭದಲ್ಲಿ 20 ಲಕ್ಷ ರೂ. ನೀಡಿ ಋತುರಾಜ್ ಗಾಯಕ್ವಾಡ್ ಅವರನ್ನು ಖರೀದಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಆತನನ್ನು ರಿಟೈನ್ ಮಾಡಿಕೊಳ್ಳಲು 6 ಕೋಟಿ ರೂ. ನೀಡಿದೆ.

ವೆಂಕಟೇಶ್ ಅಯ್ಯರ್: ಕಳೆದ ಆವೃತ್ತಿಯಲ್ಲಿ 20 ಲಕ್ಷ ರೂ. ಪಡೆಯುವುದರ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದ ವೆಂಕಟೇಶ ಅಯ್ಯರ್ ಈ ಬಾರಿ ನೆಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ 8 ಕೋಟಿ ರೂ. ಬಾಚಿಕೊಂಡಿದ್ದಾರೆ.

Edited By : Vijay Kumar
PublicNext

PublicNext

01/12/2021 08:30 pm

Cinque Terre

25.01 K

Cinque Terre

1

ಸಂಬಂಧಿತ ಸುದ್ದಿ