ಮುಂಬೈ : 2022ರ 15 ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳ ತಯಾರಿ ಜೋರಾಗಿದೆ. ಇದರ ಮಧ್ಯೆ ಕೆಎಲ್ ರಾಹುಲ್, ರಷೀದ್ ಖಾನ್ ಟೂರ್ನಿಯಿಂದ ಬ್ಯಾನ್ ಆಗುವರೇ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹೌದು ಇಂದು(ನ.30) ತಂಡದಲ್ಲಿ ಉಳಿಯುವ ಆಟಗಾರರ ಪಟ್ಟಿಯನ್ನು 8 ಫ್ರಾಂಚೈಸಿಗಳು ಪ್ರಕಟಿಸಬೇಕು. ಇದರ ನಡುವೆ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ಐಪಿಎಲ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಬಿಸಿಸಿಐಗೆ ಫ್ರಾಂಚೈಸಿಗಳು ದೂರು ನೀಡಿದೆ.
ಈ ದೂರಿನ ತನಿಖೆಗೆ ಬಿಸಿಸಿಐಗೆ ಮುಂದಾಗಿದೆ. ಆರೋಪ ಸಾಬೀತಾದಲ್ಲಿ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ಒಂದು ವರ್ಷ ಐಪಿಎಲ್ ಟೂರ್ನಿಯಿಂದ ಬ್ಯಾನ್ ಆಗಲಿದ್ದಾರೆ.
ಐಪಿಎಲ್ 2022ರಲ್ಲಿ 10 ತಂಡಗಳು ಹೋರಾಟ ನಡಸಲಿದೆ. ಹೀಗಾಗಿ ಇದೇ ತಿಂಗಳಲ್ಲಿ ಮೆಗಾ ಐಪಿಎಲ್ ಹರಾಜು ನಡೆಯಲಿದೆ. ಇದಕ್ಕೂ ಮುನ್ನ 8 ಫ್ರಾಂಚೈಸಿಗಳು ಗರಿಷ್ಠ ನಾಲ್ವರು ಆಟಗಾರರನ್ನುಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನುಳಿದ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಬೇಕಿದೆ. ಆದರೆ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ಖರೀದಿಸಲು ಲಖ್ನೌ ಫ್ರಾಂಚಿಸಿ ಇಬ್ಬರು ಆಟಗಾರರ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಹಾಲಿ ಫ್ರಾಂಚೈಸಿ ತೆೊರೆಯಲು ರಾಹುಲ್ ಹಾಗೂ ರಶೀದ್ ಖಾನ್ ತೆರೆ ಮರೆ ಕರಸತ್ತು ನಡೆಸಿದ್ದಾರೆ ಎಂದು ಪಂಜಾಬ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬಿಸಿಸಿಐಗೆ ದೂರು ನೀಡಿದೆ ಎಂದು ಇನ್ ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ರಿಟೈನ್ ನಿಯಮದ ಪ್ರಕಾರ ಯಾವುದೇ ಆಟಗಾರ ಫ್ರಾಂಚೈಸಿ ಜೊತೆಗಿನ ಮಾತುಕತೆ ಬಳಿಕ ತಂಡದಿಂದ ಹೊರಹೋಗಬಹುದು. ಅಂದರೆ ಆಟಗಾರರ ಬೇಡಿಕೆಗೆ ಫ್ರಾಂಚೈಸಿ ಒಪ್ಪಿಗೆ ಸೂಚಿಸದಿದ್ದರೆ ತಂಡದಿಂದ ಹೊರಬಂದು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಬಹುದು. ಇಲ್ಲಿ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ಮಾಡಿರುವುದು ಅದನ್ನೇ. ಆದರೆ ಅದಕ್ಕೂ ಮುನ್ನ ಈ ಇಬ್ಬರು ಹೊಸ ಫ್ರಾಂಚೈಸಿ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹಳೆಯ ಫ್ರಾಂಚೈಸಿಗಳು ಆರೋಪಿಸಿದೆ.
ಈ ಆರೋಪ ಸಾಭೀತಾದಲ್ಲಿ ಈ ಇಬ್ಬರು ಆಟಗಾರರು ಒಂದು ವರ್ಷ ಐಪಿಎಲ್ ಟೂರ್ನಿಯಿಂದ ಬ್ಯಾನ್ ಆಗುತ್ತಾರೆ.
PublicNext
30/11/2021 07:24 pm