ಜೈಪುರ್: ಯಾವೊಬ್ಬ ಆಟಗಾರ ಕೂಡ ಮೆಷಿನ್ ಅಲ್ಲ, 24 ಗಂಟೆಯೂ ಕೆಲಸ ಮಾಡಲು ಆಗುವುದಿಲ್ಲ. ಅವರೂ ಮನುಷ್ಯರೇ. ಹೀಗಾಗಿ ಬಿಡುವು ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಟೀಂ ಇಂಡಿಯಾ ಟಿ20 ತಂಡದ ನೂತನ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಸಿದ್ಧತೆ ವಿಚಾರವಾಗಿ ನಿನ್ನೆ (ಮಂಗಳವಾರ) ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್ ಶರ್ಮಾ ಅವರು ಟೀಂ ಇಂಡಿಯಾ ನೂತನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಂತೆಯೇ ಆಟಗಾರರ ವಿಶ್ರಾಂತಿ ಕುರಿತು ವಿವರಿಸಿದ್ದಾರೆ. ಪ್ರಸ್ತುತ ವಿರಾಟ್, ಶಮಿ, ಬೂಮ್ರಾ, ಜಡೇಜಾ ಹಾರ್ದಿಕ್ ಸೇರಿ ಹಲವರು ವಿಶ್ರಾಂತಿ ಪಡೆದಿದ್ದಾರೆ. ಬಳಿಕ ಟೆಸ್ಟ್ ಸರಣಿಗೆ ನಾನು ಸೇರಿ ಕೆಲವರು ರೆಸ್ಟ್ ಪಡೆಯುತ್ತೇವೆ ಎಂದು ನೂತನ ನಾಯಕ ರೋಹಿತ್ ಹೇಳಿದ್ದಾರೆ.
ಬಯೋಬಬಲ್ನಿಂದ ಆಟಗಾರರ ಒತ್ತಡ ಕಡಿಮೆ ಮಾಡುವುದು ಅತಿ ಮುಖ್ಯ. ಎಲ್ಲರೂ ರಿಫ್ರೆಶ್ ಆಗಿ ಕಣಕ್ಕಿಳಿಯಬೇಕು. ಅದರಿಂದಾಗಿಯೇ ಈ ಸರಣಿಗೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ರೋಹಿತ್ ಹೇಳಿದ್ದಾರೆ.
PublicNext
17/11/2021 07:48 am