ಅಬುಧಾಬಿ: ಟ್ರೆಂಟ್ ಬೋಲ್ಟ್ ಹಾಗೂ ಕೇನ್ ವಿಲಿಯಮ್ಸನ್, ಡೆವೊನ್ ಕಾನ್ವೇ ಉತ್ತಮ ಬ್ಯಾಟಿಂಗ್ ಸಹಾಯದಿಂದ ನ್ಯೂಜಿಲೆಂಡ್ ತಂಡವು ಅಫ್ಘಾನಿಸ್ತಾನದ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ಇಂದು ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನ್ ತಂಡದ ನಾಯಕ ಮೊಹಮ್ಮದ್ ನಬಿ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ತಂಡವು ವಿಫಲವಾಯಿತು. ಪರಿಣಾಮ 8 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತ್ತು.
ಸಾಧಾರಣ ರನ್ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಕಿವೀಸ್ 11 ಎಸೆತಗಳು ಪಾಕಿ ಇರುವಂತೆ 2 ವಿಕೆಟ್ ನಷ್ಟಕ್ಕೆ 125 ರನ್ ಸಿಡಿಸಿ ಗೆಲುವು ಸಾಧಿಸಿದೆ. ನ್ಯೂಜಿಂಡ್ ಪರ ಕೇನ್ ವಿಲಿಯಮ್ಸನ್ 40 ರನ್, ಡೆವೊನ್ ಕಾನ್ವೇ 36 ರನ್ ಗಳಿಸಿದರು.
ಇದಕ್ಕೂ ಮುನ್ನ ಅಫ್ಘಾನಿಸ್ತಾನದ ಪರ ನಜೀಬುಲ್ಲಾ ಝದ್ರಾನ್ 73 ರನ್ (48 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿದ್ದರು. ಆದರೆ ನಾಯಕ ಮೊಹಮ್ಮದ್ ನಬಿ ಸೇರಿದಂತೆ ಇನ್ನುಳಿದ ಆಟಗಾರರು 20 ರನ್‌ಗಳ ಗಡಿ ದಾಟಲು ಹೆಣಗಾಡಿದ್ದರು. ಇನ್ನು ಕಿವೀಸ್ ಪರ ಟ್ರೆಂಟ್ ಬೋಲ್ಟ್ 4 ವಿಕೆಟ್ ಉರುಳಿಸಿದರೆ, ಟಿಮ್ ಸೌಥಿ 2 ವಿಕೆಟ್, ಆಡಮ್ ಮಿಲ್ನೆ, ಜೇಮ್ಸ್ ನೀಶಮ್ ಹಾಗೂ ಇಶ್ ಸೋಧಿ ತಲಾ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದರು.
PublicNext
07/11/2021 06:44 pm