ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದೂ ಕ್ರಿಕೆಟಿಗನ ಜೊತೆ ದೀಪಾವಳಿ ಹಬ್ಬ ಆಚರಿಸಿದ ಪಾಕ್ ಕ್ರಿಕೆಟ್ ತಂಡ

ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಳೀಯ ಕಿರಿಯರ ಕ್ರಿಕೆಟ್ ತಂಡವೊಂದು ಹಿಂದೂ ಕ್ರಿಕೆಟಿಗನ ಜೊತೆಗೆ ದೀಪಾವಳಿ ಹಬ್ಬವನ್ನು ಆಚರಿಸಿದೆ. ಈ ಸಂಭ್ರಮದ ವಿಡಿಯೋವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಸಿ) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಬಲೂಚಿಸ್ತಾನದ ಅಂಡರ್-19 ತಂಡವು ಕೇಕ್ ಕಟ್ ಮಾಡಿ ಹ್ಯಾಪಿ ದೀಪಾವಳಿ ಎಂದು ವಿಶ್ ಮಾಡುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬಂದಿದೆ. ಅಷ್ಟೇ ಅಲ್ಲದೆ ತಂಡದಲ್ಲಿರುವ ಹಿಂದೂ ಆಟಗಾರ ಕಬೀರ್ ರಾಜ್ ಅವರಿಗಾಗಿ ಈ ಆಚರಣೆ ನಡೆದಿದೆ ಎನ್ನಲಾಗಿದೆ. ವಿಡಿಯೋದಲ್ಲಿ ಕಬೀರ್ ರಾಜ್ ಅವರನ್ನು ಇತರ ಆಟಗಾರರು ತಬ್ಬಿಕೊಂಡು ಶುಭ ಕೋರಿದ್ದಾರೆ.

Edited By : Vijay Kumar
PublicNext

PublicNext

05/11/2021 11:09 pm

Cinque Terre

124.54 K

Cinque Terre

4

ಸಂಬಂಧಿತ ಸುದ್ದಿ