ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪನಾದ ದಿನೇಶ್ ಕಾರ್ತಿಕ್- ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ದೀಪಿಕಾ ಪಳ್ಳಿಕಲ್

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟರ್ ದಿನೇಶ್ ಕಾರ್ತಿಕ್ ಅವರ ಪತ್ನಿ, ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಟ್ವಿಟರ್​ನಲ್ಲಿ ಈ ಇಬ್ಬರು ಕ್ರೀಡಾ ದಂಪತಿ ತಮ್ಮ ಇಬ್ಬರು ಗಂಡು ಮಕ್ಕಳೊಂದಗಿನ ಫೋಟೋ ಶೇರ್​ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿಯನ್ನು ನೀಡಿದ್ದಾರೆ. "ದೀಪಿಕಾ ಪಳ್ಳಿಕಲ್ ಮತ್ತು ನಾನು ಇಬ್ಬರು ಸುಂದರ ಗಂಡುಮಕ್ಕಳನ್ನು ಪಡೆದುಕೊಂಡಿದ್ದೇವೆ" ಎಂದು ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ತಮ್ಮ ಅಧಿಕೃತ ಟ್ವಿಟರ್ ಖಾತೆಗಳಲ್ಲಿ ತಿಳಿಸಿದ್ದಾರೆ.

ಅಲ್ಲದೇ ಆ ಮಕ್ಕಳಿಗೆ ಕಬೀರ್​ ಪಳ್ಳಿಕಲ್​ ಕಾರ್ತಿಕ್​ ಮತ್ತು ಜಿಯಾನ್ ಪಳ್ಳಿಕಲ್ ಕಾರ್ತಿಕ್ ಎಂದು ನಾಮಕರಣ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ಆಗಸ್ಟ್​ 18 2015ರಲ್ಲಿ ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕಲ್​ ಇಬ್ಬರು ವಿವಾಹವಾಗಿದ್ದರು.

Edited By : Vijay Kumar
PublicNext

PublicNext

28/10/2021 09:29 pm

Cinque Terre

40.87 K

Cinque Terre

0