ಇಸ್ಲಾಮಾಬಾದ್: ಪಾಕಿಸ್ತಾನದ ವಿರುದ್ಧ ಭಾರತ ಕ್ರಿಕೆಟ್ ತಂಡ ಸೋತಿರುವ ವಿಚಾರ ಕುರಿತ ಚರ್ಚೆ ಬೇರೆಯದ್ದೇ ಸ್ವರೂಪ ಪಡೆದುಕೊಳ್ಳುತ್ತಿದೆ. ಬೇಜಾರದ ವಿಚಾರ ಏನಂದರೆ ಪಾಕಿಸ್ತಾನದ ಹಿರಿಯ ಆಟಗಾರರು ಧರ್ಮಾಧರಿತ ಹೇಳಿಕೆಗಳನ್ನ ನೀಡಿ ತಮ್ಮ ಹಳೆ ಚಾಳಿಯನ್ನ ಮುಂದುವರಿಸಿದ್ದಾರೆ.
ಪಾಕಿಸ್ತಾನದ ಗೆಲುವನ್ನು ಹಿಂದೂಗಳ ವಿರುದ್ಧದ ಗೆಲುವು ಅಂತ ಇಮ್ರಾನ್ ಖಾನ್ ಸರ್ಕಾರದ ಸಚಿವ ಶೇಖ್ ರಶೀದ್ ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಅಲ್ಲಿನ ಮಾಜಿ ಆಟಗಾರ ವಕಾರ್ ಯೂನಿಸ್, ಟಿವಿ ಶೋನಲ್ಲಿ ಒಂದರಲ್ಲಿ ಧರ್ಮವನ್ನು ಎಳೆದು ತಂದಿದ್ದರು.
ವ್ಯಾಪಕ ವಿರೋಧ, ಟೀಕೆ ವ್ಯಕ್ತವಾದ ಬೆನ್ನಲ್ಲೇ ವಕಾರ್ ಯೂನಿಸ್ ಟ್ವೀಟ್ ಮಾಡಿ ಕ್ಷಮೆ ಕೇಳಿದ್ದಾರೆ. "ಮಾತಿನ ಭರದಲ್ಲಿ, ನಾನು ಹೀಗೆ ಹೇಳಿದ್ದೇನೆ ಆದರೆ ನನ್ನ ಉದ್ದೇಶ ಅದಾಗಿರಲಿಲ್ಲ, ಇದು ಹಲವರ ಭಾವನೆಗಳಿಗೆ ನೋವುಂಟು ಮಾಡಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ, ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಇದು ನಿಜವಾಗಿಯೂ ತಪ್ಪು. ಕ್ರೀಡೆಯು ಜನಾಂಗ, ಬಣ್ಣ ಅಥವಾ ಧರ್ಮವನ್ನು ಲೆಕ್ಕಿಸದೆ ಜನರನ್ನು ಒಂದುಗೂಡಿಸುತ್ತದೆ" ಎಂದು ವಕಾರ್ ಟ್ವೀಟ್ ಮಾಡಿದ್ದಾರೆ.
PublicNext
27/10/2021 08:06 pm