ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲೈವ್‌ ಪ್ರೋಗ್ರಾಮ್‌ನಲ್ಲೇ ಶೋಯೆಬ್ ಅಖ್ತರ್‌ಗೆ ಅವಮಾನ

ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರಿ ಸ್ವಾಮ್ಯದ ಪಿಟಿವಿಯಲ್ಲಿ ಪಾಕ್‌ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರಿಗೆ ಅವಮಾನ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು. ಪಿಟಿವಿಯಲ್ಲಿ ಮಂಗಳವಾರ ಪಾಕಿಸ್ತಾನ – ನ್ಯೂಜಿಲೆಂಡ್ ಪಂದ್ಯದ ಬಗ್ಗೆ ಚರ್ಚೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿವಿಯನ್ ರಿಚರ್ಡ್ಸ್, ಡೇವಿಡ್‌ ಗೋವರ್, ರಶೀದ್‌ ಲತೀಫ್‌, ಉಮರ್‌ ಗುಲ್‌, ಅಕೀಬ್ ಜಾವೇದ್ ಪಾಕಿಸ್ತಾನ ಮಹಿಳಾ ತಂಡದ ಮಾಜಿ ನಾಯಕಿ ಸನಾ ಮಿರ್ ಅವರು ಸಹ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.

ನಿರೂಪಕ ನೊಮನ್ ನಿಯಾಜ್ ಕೆಲವು ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅಖ್ತರ್, ಮೈಕ್ರೊಫೋನ್ ತೆಗೆದು ತಕ್ಷಣ ಕಾರ್ಯಕ್ರಮದಿಂದ ಹೊರಟು ಹೋಗಿದ್ದಾರೆ. ಆದರೆ ನೊಮನ್ ನಿಯಾಜ್ ಅವರು ಅಖ್ತರ್ ಅವರನ್ನು ಮರಳಿ ಕರೆಯುವ ಯಾವುದೇ ಪ್ರಯತ್ನ ಮಾಡಲಿಲ್ಲ. ಅಲ್ಲದೆ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಎಂದಿನಂತೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.

ಟಿವಿ ಕಾರ್ಯಕ್ರಮದಿಂದ ಅಖ್ತರ್ ಹೊರನಡೆದ ಬೆನ್ನಲ್ಲೇ ಇದೇ ವಿಚಾರವಾಗಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್‌ ಆಗಿದ್ದು, ಪರ– ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ನಿಯಾಜ್‌ ಅವರು ಕೂಡಲೇ ಅಖ್ತರ್‌ ಬಳಿ ಕ್ಷಮೆಯಾಚಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಟಿ–20 ವಿಶ್ವಕಪ್‌ನಲ್ಲಿ ಮಂಗಳವಾರ ನಡೆದ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಐದು ವಿಕೆಟ್‌ಗಳ ಜಯ ಸಾಧಿಸಿದೆ.

ಈ ಸಂಬಂಧ ಬುಧವಾರ ಟ್ವಿಟರ್‌ನಲ್ಲಿ ಸ್ಪಷ್ಟನೆ ಕೊಟ್ಟಿರುವ ಅಖ್ತರ್, 'ಟಿವಿ ಕಾರ್ಯಕ್ರಮದಿಂದ ಹೊರಬಂದಿರುವ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಭಾವಿಸಿದ್ದೇನೆ. ನಿರೂಪಕ ನೊಮನ್ ನಿಯಾಜ್ ಅವರು ಕಾರ್ಯಕ್ರಮದ ನೇರ ಪ್ರಸಾರದ ವೇಳೆ ಅಸಭ್ಯವಾಗಿ ವರ್ತಿಸಿದ್ದರು. ಜತೆಗೆ ‌ನನ್ನನ್ನು ಕಾರ್ಯಕ್ರಮದಿಂದ ಹೊರಹೋಗುವಂತೆ ಸೂಚಿಸಿದರು. ಇದು ನನಗೆ ಬೇಸರ ಮೂಡಿಸಿತು. ಹಾಗಾಗಿ ನಾನು ಕಾರ್ಯಕ್ರಮದಿಂದ ಹೊರಬಂದಿದ್ದೇನೆ’ ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

27/10/2021 03:15 pm

Cinque Terre

64.99 K

Cinque Terre

3