ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

T20 WC | SA vs WI: ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದ ಹರಿಣರು

ದುಬೈ: ಏಡೆನ್ ಮಾರ್ಕ್ರಾಮ್ ಅರ್ಧ ಶತಕ, ರೀಜಾ ಹೆಂಡ್ರಿಕ್ಸ್ ಹಾಗೂ ರಾಸ್ಸಿ ವ್ಯಾನ್ ಡರ್ ಡಸೆನ್ ಉತ್ತಮ ಬ್ಯಾಟಿಂಗ್ ಸಹಾಯದಿಂದ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ 18ನೇ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು 8 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸು ಶಕ್ತವಾಗಿತ್ತು.

ಈ ಟಾರ್ಗೆಟ್ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 10 ಎಸೆತಗಳು ಬಾಕಿ ಇರುವಂತೆ 2 ವಿಕೆಟ್‌ ನಷ್ಟಕ್ಕೆ 144 ರನ್‌ ಚಚ್ಚಿ ಗೆಲುವು ಸಾಧಿಸಿದೆ. ಈ ಮೂಲಕ 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ದಕ್ಷಿಣ ಆಫ್ರಿಕಾ ಪರ ಏಡೆನ್ ಮಾರ್ಕ್ರಾಮ್ 51 ರನ್, ರಾಸ್ಸಿ ವ್ಯಾನ್ ಡರ್ ಡಸೆನ್ 43 ರನ್ ಹಾಗೂ ರೀಜಾ ಹೆಂಡ್ರಿಕ್ಸ್ 39 ರನ್‌ ಸಿಡಿಸಿದರು.

ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಪರ ಎವಿನ್ ಲೂಯಿಸ್ 56 ರನ್ (35 ಎಸೆತ, 3 ಬೌಂಡರಿ, 6 ಸಿಕ್ಸ್) ಹಾಗೂ ಕೀರನ್ ಪೊಲಾರ್ಡ್ 26 ರನ್ ( 20 ಎಸೆತ, 2 ಬೌಂಡರಿ, 1 ಸಿಕ್ಸರ್) ಗಳಿಸಿದ್ದರು. ಲೆಂಡ್ಲ್ ಸಿಮನ್ಸ್ ತಂಡಕ್ಕೆ ದುಬಾರಿಯಾಗಿದ್ದರು. ಅವರು 35 ಎಸೆತಗಳಲ್ಲಿ ಕೇವಲ 16 ರನ್‌ ಗಳಿಸಲು ಶಕ್ತರಾಗಿದ್ದರು. ಇನ್ನುಳಿದ ಪ್ರಮುಖ ಬ್ಯಾಟರ್‌ಗಳಾದ ಕ್ರಿಸ್ ಗೇಲ್ (12 ರನ್), ಶಿಮ್ರಾನ್ ಹೆಟ್ಮೆಯರ್ (1 ರನ್), ನಿಕೋಲಸ್ ಪೂರನ್ (12 ರನ್), ಆಂಡ್ರೆ ರಸೆಲ್ (5 ರನ್‌) ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದರು.

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಡ್ವೈನ್ ಪ್ರಿಟೋರಿಯಸ್ 3 ವಿಕೆಟ್ ಕಿತ್ತರೆ, ಕೇಶವ್ ಮಹಾರಾಜ್ 2 ವಿಕೆಟ್, ಕಗಿಸೊ ರಬಾಡ ಹಾಗೂ ಅನ್ರಿಚ್ ನಾರ್ಕಿಯಾ ತಲಾ ಒಂದು ವಿಕೆಟ್ ಉರುಳಿಸಿದ್ದರು.

Edited By : Vijay Kumar
PublicNext

PublicNext

26/10/2021 07:13 pm

Cinque Terre

48.26 K

Cinque Terre

0

ಸಂಬಂಧಿತ ಸುದ್ದಿ