ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

T20 WC | SA vs WI: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ

ದುಬೈ: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ 18ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿವೆ. ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ಕ್ವಿಂಟನ್ ಡಿಕಾಕ್ ಬದಲಿಗೆ ರೀಜಾ ಹೆಂಡ್ರಿಕ್ಸ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ಈ ಹಿಂದಿನ ಪಂದ್ಯದಲ್ಲಿ ಆಡಿದ ಬಳಗದೊಂದಿಗೆ ಕಣಕ್ಕಿಳಿದಿದೆ.

ಎರಡು ತಂಡಗಳಿಗೂ ಈ ಬಾರಿಯ ವಿಶ್ವಕಪ್‌ನ ಎರಡನೇ ಪಂದ್ಯ ಇದಾಗಿದೆ. ಆದರೆ ಎರಡು ತಂಡಗಳು ಕೂಡ ತಮ್ಮ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿದೆ. ಇಂದಿನ ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಮುನ್ನುಗ್ಗಲು ಎರಡು ತಂಡಗಳು ಕೂಡ ಹಾತೊರೆಯುತ್ತಿದೆ.

ತಂಡಗಳು ಹೀಗಿವೆ:

ದಕ್ಷಿಣ ಆಫ್ರಿಕಾ ಆಡುವ ಬಳಗ: ಟೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡರ್ ಡಸೆನ್, ಏಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಕಿಯಾ, ತಬ್ರೈಜ್ ಶಮ್ಸಿ

ವೆಸ್ಟ್ ಇಂಡೀಸ್ ಆಡುವ ಬಳಗ: ಲೆಂಡ್ಲ್ ಸಿಮನ್ಸ್, ಎವಿನ್ ಲೂಯಿಸ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೀರಾನ್ ಪೊಲಾರ್ಡ್ (ನಾಯಕ), ಆಂಡ್ರೆ ರಸೆಲ್, ಡ್ವೇನ್ ಬ್ರಾವೋ, ಅಕೀಲ್ ಹೊಸೈನ್, ಹೇಡನ್ ವಾಲ್ಷ್, ರವಿ ರಾಂಪಾಲ್

ಬೆಂಚ್: ಒಬೆಡ್ ಮೆಕಾಯ್, ರೋಸ್ಟನ್ ಚೇಸ್, ಆಂಡ್ರೆ ಫ್ಲೆಚರ್, ಓಶೇನ್ ಥಾಮಸ್

Edited By : Vijay Kumar
PublicNext

PublicNext

26/10/2021 03:35 pm

Cinque Terre

39.27 K

Cinque Terre

0

ಸಂಬಂಧಿತ ಸುದ್ದಿ