ನವದೆಹಲಿ: ನಿನ್ನೆ (ಭಾನುವಾರ) ನಡೆದ ಹೈವೋಲ್ಟೇಜ್ ಮ್ಯಾಚ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕ್ ಟೀಂ 10 ವಿಕೆಟ್ಗಳ ಗೆಲುವು ಸಾಧಿಸಿತ್ತು.
ಬದ್ಧವೈರಿ ಪಾಕಿಸ್ತಾನ ವಿರುದ್ಧದ ಸೋಲು ಅಭಿಮಾನಿಗಳ ಪಾಲಿಗೆ ಅರಗಿಸಿಕೊಳ್ಳುಲು ಸಾಧ್ಯವಾಗುತ್ತಿಲ್ಲ. ಸೋಲಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಟಾರ್ಗೆಟ್ ಮಾಡಿದ್ದಾರೆ. ಶಮಿಯನ್ನು ನಿಂದಿಸಿ ಹಲವರು ಪೋಸ್ಟ್ ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಕಮೆಂಟ್ ಮಾಡಿರುವ ಕೆಲವರು ಮೊಹಮ್ಮದ್ ಶಮಿ ಅವರನ್ನು ಮೋಸಗಾರ, ನಿನ್ನನ್ನು ದೇಶದಿಂದಲೇ ಹೊರಗೆ ಹಾಕಬೇಕು ಎಂದು ನಿಂದಿಸಿದ್ದಾರಂತೆ. ಶಮಿ ವಿರುದ್ಧದ ಟೀಕೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್ ಟೀಕಾಕಾರ ವಿರುದ್ಧ ಸಿಡಿದೆದ್ದಿದ್ದಾರೆ. ಶಮಿ ಬೆಂಬಲಕ್ಕೆ ನಾವಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
PublicNext
25/10/2021 08:46 pm