ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್‌ನಲ್ಲಿ ಹೊಸ ತಂಡ ಎಂಟ್ರಿ: 'ಅಹಮದಾಬಾದ್' ಅದಾನಿ ಪಾಲು, ಆರ್‌ಎಸ್‌ಪಿಜಿ ಗ್ರೂಪ್ ಕೈ ಸೇರಿದ 'ಲಕ್ನೋ'

ದುಬೈ: ಮುಂದಿನ ಆವೃತ್ತಿಯ ಐಪಿಎಲ್ ಕೂಟಕ್ಕೆ ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಮುಂದಿನ ಆವೃತ್ತಿಯಿಂದ ಎರಡು ತಂಡಗಳು ಸೇರ್ಪಡೆಯಾಗುವ ಕಾರಣ ಅದರ ಆಯ್ಕೆ ಪ್ರಕ್ರಿಯೆ ಇಂದು ದುಬೈನಲ್ಲಿ ನಡೆಯಿತು. ಈ ವೇಳೆ ಆರ್‌.ಪಿ ಸಂಜೀವ್ ಗೋಯೆಂಕಾ (ಆರ್‌ಎಸ್‌ಪಿಜಿ) ಗ್ರೂಪ್‌ನ ಲಕ್ನೋ ತಂಡ ಮತ್ತು ಅದಾನಿ ಒಡೆತನದ ಅಹಮದಾಬಾದ್ ಎರಡು ಹೊಸ ತಂಡಗಳನ್ನು ಇಂದು ಬಿಡ್ ಮೂಲಕ ಖರೀದಿ ನಡೆದಿದೆ.

ಅಹಮದಾಬಾದ್ ತಂಡವನ್ನು ಭಾರತದ ಉದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಅದಾನಿ ಗ್ರೂಪ್ 5,166 ಕೋಟಿ ರೂ. ಬಿಡ್ ಮಾಡಿದ್ದರೆ, ಆರ್‌ಎಸ್‌ಪಿಜಿ ಗ್ರೂಪ್ 7,090 ಕೋಟಿ ರೂ. ಲಕ್ನೋ ತಂಡವನ್ನು ಖರೀದಿ ಮಾಡಿದ್ದಾರೆ. ಈ ಮೂಲಕ ಐಪಿಎಲ್‍ನ ಮುಂದಿನ ಸೀಸನ್‍ನಲ್ಲಿ 8 ತಂಡಗಳ ಬದಲಾಗಿ 10 ತಂಡಗಳು ಕಣಕ್ಕಿಳಿಯಲಿದೆ.

Edited By : Vijay Kumar
PublicNext

PublicNext

25/10/2021 08:21 pm

Cinque Terre

56.82 K

Cinque Terre

11

ಸಂಬಂಧಿತ ಸುದ್ದಿ