ದುಬೈ: ಇಂಡಿಯಾ-ಪಾಕ್ T20 ವಿಶ್ವ ಕಪ್ ಕ್ರಿಕೆಟ್ ಪಂದ್ಯ ಆರಂಭಕ್ಕೂ ಮುನ್ನ ಇಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆದಿದೆ. ಹೌದು. ಕ್ರಿಕೆಟ್ ಆಟಗಾರರೆಲ್ಲ ಮಂಡಿಯೂರಿದ್ದಾರೆ. ಇದನ್ನ ಕಂಡ ಜನರಿಗೆ ಏನು ಇದು ಅನ್ನೋ ಪ್ರಶ್ನೆನೂ ಇದೆ. ಈ ಪ್ರಶ್ನೆಗೆ ಉತ್ತರ ಸಿಂಪಲ್ ಆಗಿಯೇ ಇದೆ. ಅದುವೇ ಹೋರಾಟ..ಆ ವ್ಯಕ್ತಿಗಾದ ಅನ್ಯಾಯಕ್ಕಾಗಿ ಹೋರಾಟ. ಎಲ್ಲರೂ ಈ ಹೋರಾಟದಲ್ಲಿ ಭಾಗಿ ಆಗಿದ್ದಾರೆ. ಅದ್ಹಾಗೆ ಏನ್ ಅದು ಅನ್ನೋರಿಗೆ ಇಲ್ಲಿದೆ ಡಿಟೈಲ್ಸ್.
ಅಮೆರಿಕದಲ್ಲಿ ಕಳೆದ ವರ್ಷ ಒಂದು ಘಟನೆ ನಡೆಯಿತು. ಕಪ್ಪು ವರ್ಣದ ವ್ಯಕ್ತಿಯನ್ನ ಬಿಳಿ ವರ್ಣದ ಪೊಲೀಸ್ ರಸ್ತೆ ಮಧ್ಯೆ ಕುತ್ತಿಗೆ ಮೇಲೆ ಮೊಣಕಾಲಿಟ್ಟು ಉಸಿರುಗಟ್ಟಿಸಿ ಕೊಂದು ಹಾಕಿದ್ದ.ಈ ಕ್ರೂರ ಕೃತ್ಯಕ್ಕೆ ಇಡೀ ಜಗತ್ತೆ ಮರುಗಿದೆ. ಬಿಳಿ ವರ್ಣದ ವ್ಯಕ್ತಿಯ ಕೆಲಸಕ್ಕೆ ಹಿಡಿ ಶಾಪ ಹಾಕಿದೆ.ಅಂದಿನಿಂದಲೇ ಶುರು ಆಗಿದ್ದೇ ಈ ಬ್ಲ್ಯಾಕ್ ಲೈವ್ ಮ್ಯಾಟರ್. ಇದನ್ನ BLM ಅಂತಲೂ ಕರೆಯುತ್ತಾರೆ. ಈ BLM ಚಳುವಳಿಗಾಗಿಯೇ T20 ವಿಶ್ವ ಕಪ್ ಪಂದ್ಯದ ಮುಂಚೆ ಎಲ್ಲರೂ ಮಂಡಿಯೂರಿ ಬೆಂಬಲ ಸೂಚಿಸಿರೋದು. ಇದೇ ಈ ಒಟ್ಟು ಸ್ಟೋರಿ ಸತ್ಯ.
PublicNext
24/10/2021 10:16 pm