ದುಬೈ: ಇಂದಿನಿಂದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಿದೆ. ನಾಳೆ ರವಿವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಹೈವೋಲ್ಟೇಜ್ ಪಂದ್ಯ ದುಬೈನಲ್ಲಿ ಭಾರತ ಮತ್ತು ಪಾಕಿಸ್ಥಾನ ತಂಡಗಳ ನಡುವೆ ನಡೆಯಲಿದೆ. ಇನ್ನು ನಾಳೆ ನಡೆಯುವ ಪಂದ್ಯಕ್ಕಾಗಿ ಪಾಕಿಸ್ಥಾನ ಒಂದು ದಿನ ಮೊದಲೇ 12 ಮಂದಿ ಸದಸ್ಯರ ತಂಡವನ್ನು ಪ್ರಕಟ ಮಾಡಿದೆ.
ಪಾಕ್ ತಂಡ: ಬಾಬರ್ ಅಜಮ್ (ನಾ), ಮೊಹಮ್ಮದ್ ರಿಜ್ವಾನ್ (ವಿ,ಕೀ), ಫಖರ್ ಜಮಾನ್, ಹೈದರ್ ಅಲಿ, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಶಾದಬ್ ಖಾನ್ (ಉ.ನಾ), ಇಮಾದ್ ವಾಸಿಂ, ಹಸನ್ ಅಲಿ, ಶಾಹೀನ್ ಶಾ ಅಫ್ರಿದಿ, ಹಾರಿಸ್ ರೌಫ್.
ಬಾಬರ್ ಅಜಮ್ ನೇತೃತ್ವದ ತಂಡವು ಮುಂಬರುವ ಮೆಗಾ ಈವೆಂಟ್ನಲ್ಲಿ ಭಾರತದ ವಿರುದ್ಧ ವಿಶ್ವಕಪ್ ಸರಪಣಿಯನ್ನು ಮುರಿಯಲು ಎದುರು ನೋಡುತ್ತಿದೆ.
ಗಮನಾರ್ಹವೆಂದರೆ, ಟಿ20 ವಿಶ್ವಕಪ್ ಅಥವಾ 50 ಓವರ್ ಗಳ ವಿಶ್ವಕಪ್ ಆಗಿರಲಿ, ಯಾವುದೇ ವಿಶ್ವಕಪ್ ಮುಖಾಮುಖಿಯಲ್ಲಿ ಪಾಕಿಸ್ತಾನ ಇದುವರೆಗೂ ಭಾರತವನ್ನು ಸೋಲಿಸಿಲ್ಲ.
PublicNext
23/10/2021 07:46 pm