ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಮಹಾ ಟೂರ್ನಿಗೆ ಇನ್ನೇನು ಕೆಲವು ದಿನಗಳಷ್ಟೆ ಬಾಕಿಯಿದೆ. ಕ್ರಿಕೆಟ್ ಅಭಿಮಾನಿಗಳು ಮ್ಯಾಚ್ ವೀಕ್ಷಣೆಗೆ ತುದಿಗಾಲಿನಲ್ಲಿದ್ದಾರೆ. ಈಗಾಗಲೇ ಭಾರತ ತಂಡದ ಘೋಷಣೆಯಾಗಿದೆ. ಬುಧವಾರ, ಟೀಂ ಇಂಡಿಯಾದ ಜರ್ಸಿ ಬಿಡುಗಡೆಯಾಗಿದೆ.
ಬಿಸಿಸಿಐ, ಟೀಂ ಇಂಡಿಯಾದ ಹೊಸ ಜರ್ಸಿಯನ್ನು ಬಿಡುಗಡೆ ಮಾಡಿದ್ದು ಟೀಂ ಇಂಡಿಯಾದ ಕೆಲ ಆಟಗಾರರು ಹೊಸ ಜರ್ಸಿಯಲ್ಲಿ ಮಿಂಚುತ್ತಿದ್ದಾರೆ. ಬಿಸಿಸಿಐ, ಹೊಸ ಜರ್ಸಿ ಫೋಟೋವನ್ನು ಹಂಚಿಕೊಂಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಅನೇಕ ಆಟಗಾರರು ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.
ನೀಲಿ ಬಣ್ಣದ ಹೊಸ ಜರ್ಸಿಯ ಪ್ರಾಯೋಜಕತ್ವವನ್ನು ಬೈಜಸ್ ವಹಿಸಿಕೊಂಡಿದೆ. ಅಕ್ಟೋಬರ್ 17 ರಿಂದ ಪಂದ್ಯಗಳು ಶುರುವಾಗಲಿವೆ.
ಅಕ್ಟೋಬರ್ 24 ರಂದು ಟಿ 20 ವಿಶ್ವಕಪ್ ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯ ಹೆಚ್ಚು ವಿಶೇಷವಾಗಿದೆ. ಭಾರತ ಮೊದಲ ಪಂದ್ಯವನ್ನು ಪಾಕಿಸ್ತಾನದ ಜೊತೆ ಆಡಲಿದೆ.
ಟಿ 20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ 5 ಪಂದ್ಯಗಳು ನಡೆದಿದ್ದು, ಇದುವರೆಗೂ ಪಾಕಿಸ್ತಾನ ಒಂದು ಪಂದ್ಯವನ್ನು ಗೆದ್ದಿಲ್ಲ. ಅಕ್ಟೋಬರ್ 24 ರಂದು, ಉಭಯ ತಂಡಗಳು ಬರೋಬ್ಬರಿ ಎರಡು ವರ್ಷಗಳ ನಂತರ ಮುಖಾಮುಖಿಯಾಗಲಿವೆ.
PublicNext
13/10/2021 04:02 pm