ಶಾರ್ಜಾ: ಮಹತ್ವದ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಪಡೆಯು ವೈಫಲ್ಯ ತೋರಿದ ಪರಿಣಾಮ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 139 ರನ್‌ಗಳ ಸಾಧಾರಣ ಮೊತ್ತದ ಗುರಿ ಸಿಕ್ಕಿದೆ.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡು ಅಚ್ಚರಿಸಿ ಮೂಡಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಲು ಶಕ್ತವಾಯಿತು. ತಂಡದ ಪರ ನಾಯಕ ವಿರಾಟ್ ಕೊಹ್ಲಿ (39 ರನ್) ಹಾಗೂ ದೇವದತ್ ಪಡಿಕ್ಕಲ್ (21 ರನ್) ಹೊರತುಪಡಿಸಿ ಯಾವುದೇ ಆಟಗಾರರು 20 ರನ್‌ಗಳ ಗಡಿ ದಾಟುವಲ್ಲಿ ವಿಫಲರಾದರು.
ಮಹತ್ವದ ಪಂದ್ಯದಲ್ಲೇ ಗ್ಲೇನ್ ಮ್ಯಾಕ್ಸ್‌ವೆಲ್ (11 ರನ್), ಶ್ರೀಕರ್ ಭರತ್ (9 ರನ್) ಹಾಗೂ ಎಬಿ ಡಿವಿಲಿಯರ್ಸ್ (11 ರನ್) ಬಹುಬೇಗ ವಿಕೆಟ್ ಕೈಚೆಲ್ಲಿದರು. ಇನ್ನು ಕೆಕೆಆರ್ ಪರ ಸುನೀಲ್ ನರೈನ್ ಪ್ರಮುಖ 4 ವಿಕೆಟ್ ಕಿತ್ತು ಮಿಂಚಿದರೆ, ಲಾಕಿ ಫರ್ಗ್ಯುಸನ್ 2 ವಿಕೆಟ್ ಉರುಳಿಸಿದರೆ, ವರುಣ್ ಚಕ್ರವರ್ತಿ ರನ್ ಏರಿಕೆ ನಿಯಂತ್ರಿಸಿದರು. ಅವರು 4 ಓವರ್ ಬೌಲಿಂಗ್ ಮಾಡಿ ಕೇವಲ 20 ರನ್ ಬಿಟ್ಟುಕೊಟ್ಟರು.
PublicNext
11/10/2021 09:14 pm